35ನೇ ದಿನ ಪ್ರವೇಶಿಸಿದ ಅಮೆರಿಕ ಸರಕಾರ ಬಂದ್

Update: 2019-01-25 16:02 GMT

ವಾಶಿಂಗ್ಟನ್, ಜ. 25: ಅಮೆರಿಕ ಸರಕಾರದ ಆಂಶಿಕ ಬಂದನ್ನು ಕೊನೆಗೊಳಿಸುವ ಉದ್ದೇಶದ ಎರಡು ಮಸೂದೆಗಳನ್ನು ಈಗಾಗಲೇ ತಿರಸ್ಕರಿಸಿರುವ ಅಮೆರಿಕ ಸೆನೆಟ್, ಬಿಕ್ಕಟ್ಟನ್ನು ಕೊನೆಗೊಳಿಸುವ ದಾರಿಯೊಂದನ್ನು ಹುಡುಕಲು ಮುಂದಾಗಿದೆ.

ಬಂದ್ ಶುಕ್ರವಾರ 35ನೇ ದಿನವನ್ನು ಪ್ರವೇಶಿಸಿದ್ದು, ಆರ್ಥಿಕತೆಗೆ ಬೆದರಿಕೆಯಾಗಿದೆ ಹಾಗೂ ಲಕ್ಷಾಂತರ ಸರಕಾರಿ ಉದ್ಯೋಗಿಗಳು ಶುಕ್ರವಾರ ತಮ್ಮ ಎರಡನೇ ವೇತನ ಚೆಕ್‌ನಿಂದ ವಂಚಿತರಾದರು.

ಶ್ವೇತಭವನದಲ್ಲೇ ಬೀಡುಬಿಟ್ಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಕ್ಸಿಕೊ ಗಡಿ ಗೋಡೆಗೆ ಸಂಸತ್ತು ಕಾಂಗ್ರೆಸ್ ಹಣ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಅದೇ ವೇಳೆ, ಗಡಿ ಗೋಡೆಯನ್ನು ವಿರೋಧಿಸುತ್ತಿರುವ ಡೆಮಾಕ್ರಟಿಕ್ ಸಂಸದರ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರು ವಾರಾಂತ್ಯಕ್ಕಾಗಿ ವಾಶಿಂಗ್ಟನ್‌ನಿಂದ ಹೊರಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News