ಇರಾನ್‌ನ ಖಾಸಗಿ ಸೇನೆಗಳ ಮೇಲೆ ಅಮೆರಿಕ ದಿಗ್ಬಂಧನ

Update: 2019-01-25 16:39 GMT

ವಾಶಿಂಗ್ಟನ್, ಜ. 25: ಮಕ್ಕಳು ಸೇರಿದಂತೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಿರಾಶ್ರಿತರನ್ನೊಳಗೊಂಡ ಇರಾನ್‌ನ ಎರಡು ಖಾಸಗಿ ಸೇನೆಗಳ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನ ವಿಧಿಸಿದೆ.

ಈ ಎರಡು ಖಾಸಗಿ ಸೇನೆಗಳು ಈ ನಿರಾಶ್ರಿತರನ್ನು ಸಾಯುವುದಕ್ಕಾಗಿಯೇ ಸಿರಿಯದ ಯುದ್ಧ ಭೂಮಿಗೆ ಕಳುಹಿಸುತ್ತಿವೆ ಎಂಬುದಾಗಿ ಆರೋಪಿಸಲಾಗಿದೆ.

‘ಫತೇಮಿಂಯಾ ಡಿವಿಶನ್’ ಮತ್ತು ‘ಝೈನಾಬಿಂಯಾ ಬ್ರಿಗೇಡ್’ ಎಂಬ ಖಾಸಗಿ ಸೇನೆಗಳು ಇರಾನ್‌ನಲ್ಲಿರುವ ಲಕ್ಷಾಂತರ ಅನಧಿಕೃತ ವಲಸಿಗರನ್ನು ಗುರಿಯಾಗಿಸಿ ಸಿರಿಯದಲ್ಲಿ ಯುದ್ಧ ಮಾಡುವಂತೆ ಬಲವಂತಪಡಿಸುತ್ತವೆ ಹಾಗೂ ಇದಕ್ಕೆ ಒಪ್ಪದವರಿಗೆ ಬಂಧಿಸುವ ಅಥವಾ ಗಡಿಪಾರು ಮಾಡುವ ಬೆದರಿಕೆ ಒಡ್ಡಲಾಗುತ್ತದೆ ಎಂದು ಅಮೆರಿಕ ಹೇಳಿದೆ.

ಸಿರಿಯದ ಬಶರ್ ಅಲ್-ಅಸ್ಸಾದ್ ಸರಕಾರಕ್ಕೆ ಸೇನಾ ಬೆಂಬಲ ನೀಡಿರುವ ಇರಾನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮುಂತಾದ ದೇಶಗಳ 80,000 ಶಿಯಾ ಬಾಡಿಗೆ ಸೈನಿಕರನ್ನು 8 ವರ್ಷಗಳ ಅವಧಿಯಲ್ಲಿ ಸಿರಿಯಕ್ಕೆ ಕಳುಹಿಸಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.

ಖಾಸಗಿ ಸೇನೆಯಲ್ಲಿ 14 ವರ್ಷ ಪ್ರಾಯದ ಮಕ್ಕಳೂ ಇದ್ದಾರೆ ಹಾಗೂ ಹಲವು ನೂರು ಮಂದಿ ಯುದ್ಧದಲ್ಲಿ ಸತ್ತಿದ್ದಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News