ಸೇನಾ ವರಿಷ್ಠ ರಾವತ್ ಸಹಿತ 19 ಹಿರಿಯ ಸೇನಾಧಿಕಾರಿಗಳಿಗೆ ಪರಮ ವಿಶಿಷ್ಟ ಸೇವಾ ಪ್ರಶಸ್ತಿ
Update: 2019-01-25 22:48 IST
ಹೊಸದಿಲ್ಲಿ, ಜ. 25: ಶಾಂತಿಕಾಲದ ಸೇವೆ ಗುರುತಿಸಿ ನೀಡಲಾಗುವ ಅತ್ಯುಚ್ಚ ಸೇನಾ ಪ್ರಶಸ್ತಿಯಾದ ಪರಮ ವಿಶಿಷ್ಟ ಸೇವಾ ಪ್ರಶಸ್ತಿಯನ್ನು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಸಹಿತ ಸೇನೆಯ 19 ಮಂದಿ ಹಿರಿಯ ಅಧಿಕಾರಿಗಳಿಗೆ ಘೋಷಿಸಲಾಗಿದೆ. 15 ಮಂದಿ ಲೆಫ್ಟಿನೆಂಟ್ ಜನರಲ್ ಹಾಗೂ ಮೂವರು ಮೇಜರ್ ಜನರಲ್‌ಗೆ ಪರಮ ವಿಶಿಷ್ಟ ಸೇವಾ ಪ್ರಶಸ್ತಿ ನೀಡಲಾಗಿದೆ. ಭಾರತದ ಎರಡನೇ ಅತ್ಯುಚ್ಚ ಶಾಂತಿ ಕಾಲದ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಕೂಡ ರಕ್ಷಣಾ ಸಚಿವಾಲಯ ಘೋಷಿಸಿದೆ. ಜಾಟ್ ರೆಜಿಮೆಂಟ್‌ನ ಮೇಜರ್ ತುಷಾರ್ ಗೌಬಾ ಹಾಗೂ 22 ರಾಷ್ಟ್ರೀಯ ರೈಫಲ್ಸ್‌ನ ಸೋವಾರ್ ವಿಜಯ್ ಕುಮಾರ್ (ಮರಣೋತ್ತರ)ಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಅಶೋಕ ಚಕ್ರ ಹಾಗೂ ಕೀರ್ತಿ ಚಕ್ರದ ಬಳಿಕದ ದೇಶದ ಮೂರನೇ ಅತ್ಯುಚ್ಚ ಶಾಂತಿ ಕಾಲದ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು 9 ಮಂದಿ ಯೋಧರಿಗೆ ನೀಡಲಾಗಿದೆ.