ನೇಪಾಳಕ್ಕೆ ಭಾರತದಿಂದ 30 ಆ್ಯಂಬುಲೆನ್ಸ್, 6 ಬಸ್‌ಗಳ ಕೊಡುಗೆ
Update: 2019-01-26 22:03 IST
ಕಠ್ಮಂಡು,ಜ.26: ತನ್ನ 70ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭಾರತವು ಸದ್ಭಾವನೆಯ ಸಂಕೇತವಾಗಿ ನೆರೆಯ ರಾಷ್ಟ್ರವಾದ ನೇಪಾಳಕ್ಕೆ 30 ಆ್ಯಂಬುಲೆನ್ಸ್‌ಗಳನ್ನು ಹಾಗೂ 6 ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ ಹಾಗೂ ಆ ದೇಶವು ಸಮೃದ್ಧಿಯನ್ನು ಸಾಧಿಸಲು ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವ ಕೊಡುಗೆಯನ್ನು ಪ್ರಕಟಿಸಿದೆ.1994ರಿಂದೀಚೆಗೆ ಭಾರತವು ನೇಪಾಳಾದ್ಯಂತ ವಿವಿಧ ಸಂಘಟನೆಗಳಿಗೆ 722 ಆ್ಯಂಬುಲೆನ್ಸ್ ಗಳನ್ನು ಹಾಗೂ 142 ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.