ಕುಂಭಮೇಳದಲ್ಲಿ ಪವಿತ್ರ ಸ್ನಾನದ ಬಳಿಕ ಪ್ರಿಯಾಂಕಾ ಗಾಂಧಿಯಿಂದ ಪಕ್ಷದ ಹುದ್ದೆ ನಿರ್ವಹಣೆ

Update: 2019-01-26 17:46 GMT

ಹೊಸದಿಲ್ಲಿ, ಜ. 26: ಪೂರ್ವ ಉತ್ತರಪ್ರದೇಶಕ್ಕೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಬುಧವಾರ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ, ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 4ರಂದು ಪವಿತ್ರ ಸ್ಥಾನ ಮಾಡಿದ ಬಳಿಕ ಪಕ್ಷದ ತನ್ನ ಹುದ್ದೆ ನಿರ್ವಹಿಸಲಿದ್ದಾರೆ. ಪಕ್ಷದ ಮುಖ್ಯಸ್ಥ ಹಾಗೂ ಸಹೋದರ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ಅವರ ಜೊತೆಗಿರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಈ ಸಂದರ್ಭ ಲಕ್ನೋದಲ್ಲಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಮೌನಿ ಅಮಾವಾಸ್ಯೆ’ ಹಾಗೂ ಎರಡನೇ ‘ಶಹಿ ಸ್ನಾನ’ದ ಸಂದರ್ಭ ಪವಿತ್ರ ಸ್ನಾನ ಮಾಡಲು ಫೆಬ್ರವರಿ 4ರಂದು ಪ್ರಿಯಾಂಕಾ ಗಾಂಧಿ ತನ್ನ ಸಹೋದರನೊಂದಿಗೆ ಕುಂಭಮೇಳಕ್ಕೆ ಆಗಮಿಸಲಿದ್ದಾರೆ. ಆದರೆ, ಫೆಬ್ರವರಿ 4ರಂದು ಪವಿತ್ರ ಸ್ನಾನಕ್ಕೆ ಅವಕಾಶ ಸಿಗದೇ ಇದ್ದರೆ, ಅವರು ‘ಬಸಂತ ಪಂಚಮಿ’ ಹಾಗೂ ‘ಮೂರನೇ ಶಹಿ ಸ್ನಾನ’ದ ದಿನವಾದ ಫೆಬ್ರವರಿ 10ರಂದು ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News