ಅಡ್ಡೂರು ಪರಿಸರದಲ್ಲಿ ಜ್ವರ ಭೀತಿ: ಆರೋಗ್ಯ ಅಧಿಕಾರಿಗಳು, ಗ್ರಾ.ಪಂ. ಸ್ಪಂದಿಸುವಂತೆ ಎಸ್.ಡಿ.ಪಿ.ಐ ಮನವಿ

Update: 2019-01-29 11:07 GMT

ಅಡ್ಡೂರು, ಜ. 29: ಕುಚ್ಚಿಗುಡ್ಡೆ ಪರಿಸರದಲ್ಲಿ ಸುಮಾರು 12 ಮಂದಿ ಟೈಫಾಯ್ಡ್ ಜ್ವರದಿಂದ ಬಳಲುತ್ತಿದ್ದು, ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು ಜ್ವರ ಇತರರಿಗೆ ಹರಡುತ್ತಿದ್ದು ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ. ಜನರ ಪ್ರಾಣಕ್ಕೆ ಅಪಾಯ ವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಎಸ್.ಡಿ.ಪಿ.ಐ ಅಡ್ಡೂರು ವಲಯ ಸಮಿತಿ ಗ್ರಾಮ ಪಂಚಾಯತ್ ಪಿಡಿಒ ಹಾಗೂ ಆರೋಗ್ಯ ಅಧಿಕಾರಿಗೆ ಮನವಿ  ಸಲ್ಲಿಸಿತು.

ಈ ಸಂದರ್ಭ ಎಸ್.ಡಿ.ಪಿ.ಐ ಅಡ್ಡೂರು ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News