ಉಪ್ಪಿನಂಗಡಿ ಹಳೆಗೇಟು: ಉಚಿತ ಟೈಲರಿಂಗ್ ಸೆಂಟರ್ ಶುಭಾರಂಭ

Update: 2019-01-29 17:25 GMT

ಉಪ್ಪಿನಂಗಡಿ, ಜ. 28: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ವತಿಯಿಂದ ನೂರುಲ್ ಹುದಾ ಅರೆಬಿಕ್ ಸ್ಕೂಲ್ ಹಳೆಗೇಟು, ಉಪ್ಪಿನಂಗಡಿ ಸಹಯೋಗದೊಂದಿಗೆ ನೂರುಲ್ ಹುದಾ ಅರೆಬಿಕ್ ಸ್ಕೂಲ್ ಹಳೆಗೇಟು ಇಲ್ಲಿ ವಿನ್ಯಾಸ ಉಚಿತ ಟೈಲರಿಂಗ್ ಸೆಂಟರ್ ಶುಭಾರಂಭಗೊಂಡಿತು.

ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಪರಿವರ್ತಿಸುವ ಸಲುವಾಗಿ ತೆರೆಯಲಾದ ಉಚಿತ ಟೈಲರಿಂಗ್ ಸೆಂಟರನ್ನು ಆಸರೆ ವಿಮೆನ್ಸ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷೆ ಶಬೀನಾ ಅಖ್ತರ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮರಿಯಂ ವಿ.ಎಂ, ಫ್ಯಾಷನ್ ಡಿಸೈನರ್ ಮೋಲಿ ಸಾಜಿ, ಆಸರೆಯ ಸದಸ್ಯೆ ಶರ್ಫುನ್ನಿಸಾ, ಟೈಲರಿಂಗ್ ಶಿಕ್ಷಕಿ ತಶ್ರೀಫಾ ಭಾಗವಹಿಸಿದ್ದರು.

ಆಸರೆ ವಿಮೆನ್ಸ್ ಫೌಂಡೇಶನ್‍ನ ಮುಖ್ಯ ಸಲಹೆಗಾರರಾದ ಖೈರುನ್ನಿಸಾ ಸಯ್ಯದ್ ಅಧ್ಯಕ್ಷತೆ ವಹಿಸಿದ್ದರು. ಆಸರೆ ವಿಮೆನ್ಸ್ ಫೌಂಡೇಶನ್‍ನ ಉಪಾಧ್ಯಕ್ಷೆ ಹಾಗೂ ಸೆಂಟರ್ ಉಸ್ತುವಾರಿ  ಆತಿಕಾ ರಫೀಕ್ ಸ್ವಾಗತಿಸಿ ಪ್ರಸ್ತಾವನೆಗೈದರು.

ಟೈಲರಿಂಗ್ ವಿದ್ಯಾರ್ಥಿನಿ ಮೈಮುನಾ ಖಿರಾಅತ್ ಪಠಿಸಿದರು. ಟೈಲರಿಂಗ್ ವಿದ್ಯಾರ್ಥಿನಿ ಸಹನಾ ಧನ್ಯವಾದಗೈದರು. ಟ್ಯಾಲೆಂಟ್ ಗ್ರಾಜ್ಯುವೇಟ್ ಅಸೋಸಿಯೇಷನ್‍ನ ಸದಸ್ಯೆ ಸಾರಾ ಮಸ್ಕೂರುನ್ನಿಸಾ ಕಾರ್ಯಕ್ರಮ ನಿರೂಪಿಸಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದಲ್ಲಿ ಕಳೆದ ಹಲವು ವರ್ಷಗಳಿಂದ ಮಹಿಳೆಯರಿಗಾಗಿ ಕಂಕನಾಡಿ, ಕಣ್ಣೂರು, ನಂದಾವರ, ಕೋಲ್ಪೆ, ಜನತಾ ಕಾಲನಿ, ತೌಡುಗೋಳಿ, ಮಲಾರ್ ಪಾವೂರು, ಬೋಳಿಯಾರ್, ಅಡ್ಡೂರು, ಮೂಲರಪಟ್ನ, ಬೆಳ್ಮರೆಂಜಾಡಿ, ಕಿನ್ಯ, ದೆಮ್ಮಲೆ ಮೊದಲಾದ ಪ್ರದೇಶಗಳಲ್ಲಿ ಉಚಿತ ಟೈಲರಿಂಗ್ ಸೆಂಟರನ್ನು ತೆರೆದು ನೂರಾರು ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News