ನಿಹಾಲ್ ಟ್ರೋಫಿ: ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ

Update: 2019-02-01 12:50 GMT

ಹಿರಿಯಡ್ಕ, ಫೆ.1: ಕಾಜಾರಗುತ್ತು ಗೆಳೆಯರ ಬಳಗದ ಆಶ್ರಯದಲ್ಲಿ ವಿಶೇಷ ಚೇತನ ಹಾಗೂ ಬಡ ಮಕ್ಕಳ ವೈದ್ಯಕೀಯ ನೆರವಿಗಾಗಿ ತೃತೀಯ ವರ್ಷದ 40 ಗಜಗಳ ಕ್ರಿಕೆಟ್ ಪಂದ್ಯಾಟ ‘ನಿಹಾಲ್ ಟ್ರೋಫಿ -2019’ ಕಾಜಾರಗುತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಮದ್ದಳೆ ಮಾಂತ್ರಿಕ ಶತಾಯುಷಿ ಹಿರಿಯಡಕ ಗೋಪಾಲ್ ರಾವ್, ಡೋಲು ವಾದಕ ಗುರುವ ಕೊರಗ, 2018ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತೆ ಅಮ್ಮಣ್ಣಿ ಡಂಗು ಪಾಣಾರ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಚೇತನ ಮಕ್ಕಳಾದ ಮಹಾಲಕ್ಷ್ಮಿ ಹಿರೇಬೆಟ್ಟು, ರೇಷ್ಮ ಪ್ರಭು ಕೊಡಿ ಬೆಟ್ಟು, ಭುವನ್ ನಾಯಕ್ ಹೊಳೆಪಡ್ಪು, ಓಂತಿಬೆಟ್ಟಿನ ರಂಜನಿ, ರಿತೇಶ್ ನಾಯಕ್ರಿಗೆ ಸಹಾಯಧನ ವಿತರಿಸಲಾಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಮುತ್ತೂರು ಫ್ರೆಂಡ್ ವಿನ್ನರ್ಸ್‌ ಹಾಗೂ ಧೂಮಾವತಿ ಕ್ರಿಕೆಟರ್ಸ್‌ ಕಾಜಾರಗುತ್ತು ರನ್ನರ್ಸ್‌ ಪ್ರಶಸ್ತಿ ಪಡೆದವು.

ಮಣಿಪಾಲ ರಿಕ್ಷಾ ಯೂನಿಯನ್‌ನ ಮಾಜಿ ಅಧ್ಯಕ್ಷ ವಿಜಯ್ ಪುತ್ರನ್, ಕಾರ್ಯಕ್ರಮ ಸಂಘಟಕ ಸುಧೀರ್ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಗೌರಿ ಕೆ., ಉದ್ಯಮಿ ಅನಿಲ್ ಶೆಟ್ಟಿ, ಉಡುಪಿ ತಾಪಂ ಸದಸ್ಯರುಗಳಾದ ಸಂಧ್ಯಾ ಕಾಮತ್, ಲಕ್ಷ್ಮೀನಾರಾಯಣ ಪ್ರಭು ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News