ರೈಲ್ವೆಗೆ 1.58 ಲಕ್ಷ ಕೋ. ರೂ. ಘೋಷಣೆ

Update: 2019-02-01 15:41 GMT

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವ ಪಿಯೂಷ್ ಗೋಯಲ್ ರೈಲ್ವೆಗೆ 1.58 ಲಕ್ಷ ಕೋಟ ರೂ. ಬಂಡವಾಳ ವೆಚ್ಚ ಘೋಷಿಸಿದ್ದಾರೆ. ಇದು ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ಪ್ರಯತ್ನದಲ್ಲಿ ರಾಷ್ಟ್ರೀಯ ಸಾರಿಗೆದಾರರಿಗೆ ನೀಡುತ್ತಿರುವ ಅತ್ಯಧಿಕ ಮೊತ್ತ. ಕಳೆದ ವರ್ಷ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಬಟೆಟ್‌ನಲ್ಲಿ ರೈಲ್ವೆಗೆ 1.48 ಲಕ್ಷ ಕೋಟಿ ರೂ. ಮಂಜೂರು ಮಾಡಿದ್ದರು. ಇದುವರೆಗೆ ನೋಡಿದರೆ 2018-19 ಭಾರತೀಯ ರೈಲ್ವೆಗೆ ಸುರಕ್ಷಿತ ವರ್ಷ.

ಬ್ರಾಡ್‌ಗೇಜ್ ನೆಟ್‌ವರ್ಕ್‌ನಲ್ಲಿರುವ ಮಾನವ ರಹಿತ ಲೆವೆಲ್ ಕ್ರಾಂಸಿಂಗ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ರೈಲ್ವೆ ಖಾತೆಯ ಸಚಿವರು ಕೂಡ ಆಗಿರುವ ಗೋಯಲ್ ಹೇಳಿದ್ದಾರೆ. ಮುಂದಿನ ವಿತ್ತ ವರ್ಷದಲ್ಲಿ ರೈಲ್ವೆಯ ಬಂಡವಾಳ ವೆಚ್ಚ ಯೋಜನೆ ಎಲ್ಲ ಕಾಲದಲ್ಲೂ ಅತ್ಯಧಿಕ 1.58 ಲಕ್ಷ ಕೋಟಿ ರೂ. ಆಗಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್, ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಸೆಮಿ-ಹೈ ಸ್ಪೀಡ್ ರೈಲು ಭಾರತೀಯ ಪ್ರಯಾಣಿಕರಿಗೆ ಜಾಗತಿಕ ಮಟ್ಟದ ಅನುಭವವನ್ನು ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News