‘ಹೇಗಿದೆ ಜೋಶ್’: ಪ್ರತಿಧ್ವನಿಸಿದ ‘ಉರಿ’ ಸಂಭಾಷಣೆ
Update: 2019-02-01 21:13 IST
ಹೊಸದಿಲ್ಲಿ, ಪೆ. 1: ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಬಜೆಟ್ ಭಾಷಣದಲ್ಲಿ ಬ್ಲಾಕ್ ಬಸ್ಟರ್ ಸಿನೆಮಾ ‘ಉರಿ’ ಹಾಗೂ ಅದರ ‘‘ಹೇಗಿದೆ ಜೋಶ್’’ ಎಂಬ ಆಕರ್ಷಕ ಸಂಭಾಷಣೆ ಉಲ್ಲೇಖಗೊಂಡಿತು. ಬಜೆಟ್ ಮಂಡನೆಯ ಸಂದರ್ಭ ಗೋಯಲ್ ತಾನು ‘ಉರಿ’ ಸಿನೆಮಾ ನೋಡಿರುವುದಾಗಿ ಹಾಗೂ ಅದನ್ನು ತುಂಬಾ ಇಷ್ಟಪಟ್ಟಿರುವುದಾಗಿ ತಿಳಿಸಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟೈಕ್’ ಸಿನೆಮಾಕ್ಕೆ 2006ರಲ್ಲಿ ಜಮ್ಮು ಹಾಗೂ ಕಾಶ್ಮೀರರದ ಉರಿಯ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತೀಯ ಸೇನೆ ಗಡಿಯಾದ್ಯಂತದ ಉಗ್ರರ ತಾವಿನ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಆಧಾರವಾಗಿದೆ. ‘ಉರಿ’ ಚಿತ್ರವನ್ನು ವಿನೋದದಿಂದ ನೋಡಿದೆ. ಈ ಚಿತ್ರದಲ್ಲಿ ಸಾಕಷ್ಟು ಜೋಶ್ ಇದೆ ಎಂದು ಪೀಯೂಷ್ ಗೋಯಲ್ ಹೇಳಿದ್ದಾರೆ.