×
Ad

ಅಮೆರಿಕದಲ್ಲೀಗ ಬಯಲಲ್ಲಿ ನಿಂತರೆ ಸಾವು ಖಚಿತ !

Update: 2019-02-01 21:30 IST

ಶಿಕಾಗೊ, ಫೆ. 1: ಕೋಟ್ಯಂತರ ಅಮೆರಿಕನ್ನರು ಗುರುವಾರ ಶೀತಲ ಆರ್ಕ್‌ಟಿಕ್ ಖಂಡದಂಥ ಉಷ್ಣತೆಯನ್ನು ಅನುಭವಿಸಿದರು. ಉಷ್ಣತೆಯು ಮೈನಸ್ 49 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಕುಸಿದಿದೆ ಹಾಗೂ ಅಮೆರಿಕದ ಮಧ್ಯ-ಪಶ್ಚಿಮ ಭಾಗದ ಜನಜೀವನ ಸ್ಥಗಿತಗೊಂಡಿದೆ.

ಎಲುಬು ಕೊರೆಯುವ ಚಳಿಯಿಂದಾಗಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.

ಭೀಕರ ಶೀತಲ ವಾತಾವರಣವು ಮನೆಯಿಲ್ಲದವರು ಮತ್ತು ವೃದ್ಧರಿಗೆ ನರಕ ಸದೃಶ ಅನುಭವವನ್ನು ನೀಡಿದೆ. ಮಾನವ ದೇಹದ ಯಾವುದೇ ಭಾಗವು ಈ ಶೀತಲ ವಾತಾವರಣಕ್ಕೆ ಒಡ್ಡಿಕೊಂಡ ನಿಮಿಷಗಳಲ್ಲಿ ಹಿಮಹುಣ್ಣು ಉಂಟಾಗುತ್ತದೆ. ಈ ವಾತಾವರಣದಲ್ಲಿ ಬಯಲಲ್ಲಿ ನಿಲ್ಲುವುದೆಂದರೆ ಸಾವನ್ನು ಆಹ್ವಾನಿಸಿದಂತೆಯೇ ಸರಿ.

ಚಳಿಯಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆಯು ಈ ಹಿಂದಿನ 12ರಿಂದ 21ಕ್ಕೇರಿದೆ. ಶಿಕಾಗೊದಲ್ಲಿ ಇನ್ನೂ ಕನಿಷ್ಠ 9 ಸಾವುಗಳು ಸಂಭವಿಸಿವೆ ಎಂದು ಆಸ್ಪತ್ರೆಯೊಂದರ ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News