‘ಮುನ್ನೋಟ 2030’ ರ 10 ಪ್ರಮುಖ ಆಯಾಮಗಳನ್ನು ಮಂಡಿಸಿದ ವಿತ್ತಸಚಿವ

Update: 2019-02-01 16:52 GMT

ಹೊಸದಿಲ್ಲಿ,ಫೆ.1: ಶುಕ್ರವಾರ ಮಧ್ಯಂತರ ಬಜೆಟ್ ಮಂಡನೆ ಸಂದರ್ಭ ಸರಕಾರದ ‘ಮುನ್ನೋಟ 2030’ರ 10 ಪ್ರಮುಖ ಆಯಾಮಗಳನ್ನು ವಿತ್ತಸಚಿವ ಪಿಯೂಷ್ ಗೋಯಲ್ ಅವರು ದೇಶದ ಮುಂದಿರಿಸಿದರು. ಇವು ಮುಂದಿನ ದಶಕದಲ್ಲಿ 10 ಲಕ್ಷ ಕೋಟಿ ಡಾ.ಆರ್ಥಿಕತೆಯಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಭಾರತವನ್ನು ಆಧುನಿಕ,ಪ್ರಗತಿಪರ ಮತ್ತು ಪಾರದರ್ಶಕ ಸಮಾಜವನ್ನಾಗಿ ಮಾಡಲಿವೆ ಎಂದರು.

►ರಸ್ತೆಗಳು,ರೈಲ್ವೆ,ಬಂದರುಗಳು,ವಿಮಾನ ನಿಲ್ದಾಣಗಳು ಮತ್ತು ಒಳನಾಡು ಜಲಸಾರಿಗೆಯಲ್ಲಿ ಮುಂದಿನ ಪೀಳಿಗೆಯ ಮೂಲಸೌಕರ್ಯ ನಿರ್ಮಾಣ

►ದೇಶದ ಪ್ರತಿಯೊಂದೂ ಮೂಲೆಯನ್ನು ಮತ್ತು ಪ್ರತಿಯೋರ್ವ ವ್ಯಕ್ತಿಯನ್ನೂ ತಲುಪುವ ‘ಡಿಜಿಟಲ್ ಇಂಡಿಯಾ’ ನಿರ್ಮಾಣ

►ಆಮದು ಅವಲಂಬನೆಯನ್ನು ತಗ್ಗಿಸಲು ಮತ್ತು ನಮ್ಮ ಜನರಿಗ ಶಕ್ತಿ ಭದ್ರತೆಯನ್ನೊದಗಿಸಲು ಸ್ವಚ್ಛ ಮತ್ತು ನವೀಕರಿಸಬಲ್ಲ ಶಕ್ತಿಯ ಬಳಕೆಗೆ ಹೆಚ್ಚಿನ ಗಮನ

►‘ಮೇಕ್ ಇನ್ ಇಂಡಿಯಾ’ ಮಾರ್ಗವನ್ನು ಆಧರಿಸಿ ಆಧುನಿಕ ಕೈಗಾರಿಕಾ ತಂತ್ರಜ್ಞಾನಗಳನ್ನು ಬಳಸಿ ಗ್ರಾಮೀಣ ಕೈಗಾರೀಕರಣದ ವಿಸ್ತರಣೆ

►ಕಿರು-ನೀರಾವರಿ ತಂತ್ರಜ್ಞಾನಗಳನ್ನು ಬಳಸಿ ಎಲ್ಲ ಭಾರತೀಯರಿಗೆ ಸುರಕ್ಷಿತ ಕುಡಿಯುವ ನೀರು ಪೂರೈಕೆಯೊಂದಿಗೆ ಸ್ವಚ್ಛ ನದಿಗಳು

►ಮಹಾಸಾಗರಗಳು ಮತ್ತು ಕರಾವಳಿ ತೀರಗಳ ಬಗ್ಗೆ ಹೆಚ್ಚಿನ ಕಾಳಜಿ

►2022ರಲ್ಲಿ ಬಾಹ್ಯಾಕಾಶಕ್ಕೆ ಮಾನವ ಸಹಿತ ನೌಕೆಯ ಉಡಾವಣೆ

►ಆಹಾರದಲ್ಲಿ ಸ್ವಾವಲಂಬನೆ ಮತ್ತು ಸಾವಯವ ಆಹಾರಕ್ಕೆ ಒತ್ತು ನೀಡುವುದರೊಂದಿಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು

►ಒತ್ತಡರಹಿತ ಮತ್ತು ಎಲ್ಲರಿಗೂ ಸಮಗ್ರ ಆರೋಗ್ಯ ರಕ್ಷಣೆ ವ್ಯವಸ್ಥೆಯೊಂದಿಗೆ ಆರೋಗ್ಯಕರ ಭಾರತ

►ಕ್ರಿಯಾಶೀಲ,ಜವಾಬ್ದಾರಿಯುತ,ಸ್ನೇಹಮಯಿ ಆಡಳಿತಶಾಹಿ ಮತ್ತು ವಿದ್ಯುನ್ಮಾನ ಆಡಳಿತ ವ್ಯವಸ್ಥೆಯೊಂದಿಗೆ ‘ಕನಿಷ್ಠ ಸರಕಾರ ಗರಿಷ್ಠ ಆಡಳಿತ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News