ಖಶೋಗಿ ಹತ್ಯೆಯ ಧ್ವನಿಮುದ್ರಣ ಆಲಿಸಲಿರುವ ವಿಶ್ವಸಂಸ್ಥೆ ತಂಡ

Update: 2019-02-01 16:56 GMT

ಇಸ್ತಾಂಬುಲ್, ಫೆ. 1: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ಕುರಿತ ತನಿಖೆಯ ಭಾಗವಾಗಿ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತರೊಬ್ಬರು ಅವರ ಹತ್ಯೆ ಧ್ವನಿಮುದ್ರಣಗಳನ್ನು ಕೇಳಲಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ‌ತಯ್ಯಿಪ್ ಎರ್ದೊಗಾನ್‌ರ ಸಲಹೆಗಾರರೊಬ್ಬರು ಹೇಳಿದ್ದಾರೆ.

ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆ್ಯಗ್ನೆಸ್ ಕಾಲಮಾರ್ಡ್ ಮತ್ತು ಆಕೆಯ ಪರಿಣತರ ತಂಡವು ಮಂಗಳವಾರ ಟರ್ಕಿ ಅಧ್ಯಕ್ಷರ ಸಲಹೆಗಾರ ಯಾಸಿನ್ ಅಕ್ತಯ್‌ರನ್ನು ಭೇಟಿಯಾಯಿತು. ಯಾಸಿನ್ ಅಕ್ತಯ್ ಮೃತ ಖಶೋಗಿಯ ಮಿತ್ರರಾಗಿದ್ದರು.

ಈ ತಂಡವು ಖಶೋಗಿ ಹತ್ಯೆ ಧ್ವನಿಮುದ್ರಣಗಳನ್ನು ಆಲಿಸಲಿದೆ ಎಂದು ಅವರು ನುಡಿದರು.

‘ವಾಶಿಂಗ್ಟನ್ ಪೋಸ್ಟ್’ನಲ್ಲಿ ಅಂಕಣಗಳನ್ನು ಬರೆಯುತ್ತಿದ್ದ ಖಶೋಗಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದರು. ಅವರನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್ 2ರಂದು ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News