ಮ್ಯಾನ್ಮಾರ್ ನಲ್ಲಿ ಟೀಕಾಕಾರರ ದಮನಕ್ಕೆ ಉಗ್ರ ಕಾನೂನುಗಳು; ಹ್ಯೂಮನ್ ರೈಟ್ಸ್ ವಾಚ್

Update: 2019-02-01 17:00 GMT

ಯಾಂಗನ್ (ಮ್ಯಾನ್ಮಾರ್), ಫೆ. 1: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ನೇತೃತ್ವದ ಮ್ಯಾನ್ಮಾರ್ ಸರಕಾರವು ಶಾಂತಿಯುತ ಟೀಕಾಕಾರರನ್ನು ಶಿಕ್ಷಿಸಲು ದಮನಕಾರಿ ಕಾನೂನುಗಳನ್ನು ಬಳಸುತ್ತಿದೆ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಶುಕ್ರವಾರ ಹೇಳಿದೆ.

ಇದರೊಂದಿಗೆ, ಮೊದಲ ಪ್ರಜಾಸತ್ತಾತ್ಮಕ ಸರಕಾರದ ನಾಯಕಿ ವಾಕ್‌ಸ್ವಾತಂತ್ಯವನ್ನು ರಕ್ಷಿಸುತ್ತಾರೆ ಎಂಬ ಭರವಸೆ ಹುಸಿಯಾಗಿದೆ ಎಂದು ಅದು ಹೇಳಿದೆ.

ಅವರ ಸರಕಾರ 2016ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಅಭಿವ್ಯಕ್ತಿ ಸ್ವಾತಂತ್ರ ಕ್ಷೀಣಿಸುತ್ತಿದೆ ಹಾಗೂ ಅವರ ಕಾನೂನುಗಳು ಪತ್ರಕರ್ತರಲ್ಲಿ ‘ಹೆದರಿಕೆಯ ವಾತಾವರಣ’ವೊಂದನ್ನು ಸೃಷ್ಟಿಸಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತನ್ನ ‘ಹುಸಿಯಾದ ಭರವಸೆಗಳು: ಮ್ಯಾನ್ಮಾರ್‌ನಲ್ಲಿ ಶಾಂತಿಯುತ ಅಭಿವ್ಯಕ್ತಿಯ ಅಪರಾಧೀಕರಣ’ ಎಂಬ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News