×
Ad

ಸಿಬಿಐಗೆ ನಾಗೇಶ್ವರ ರಾವ್ ನೇಮಕ ‘ಅಸಂಬದ್ಧ’: ಸುಪ್ರೀಂ ಕೋರ್ಟ್

Update: 2019-02-01 23:15 IST

ಹೊಸದಿಲ್ಲಿ, ಫೆ. 1: ಸಿಬಿಐಗೆ ಖಾಯಂ ನಿರ್ದೇಶಕರನ್ನು ಯಾಕೆ ನಿಯೋಜಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ಸಿಬಿಐಗೆ ದೀರ್ಘಾವಧಿ ಮಧ್ಯಂತರ ಮುಖ್ಯಸ್ಥರನ್ನು ನಿಯೋಜಿಸಿರುವುದು ಅಸಂಬದ್ಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಐ ನಿರ್ದೇಶಕರ ಹುದ್ದೆ ಅತಿ ಸೂಕ್ಷ ಹಾಗೂ ಈ ಹುದ್ದೆಗೆ ಸರಕಾರ ಕೂಡಲೇ ಖಾಯಂ ನಿರ್ದೇಶಕರನ್ನು ನಿಯೋಜಿಸಬೇಕು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠ ಹೇಳಿದೆ. ನೂತನ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶುಕ್ರವಾರ ಉನ್ನತಾಧಿಕಾರ ಸಮಿತಿ ಸಬೆ ನಡೆಯಲಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಎಂ. ನಾಗೇಶ್ವರ್ ರಾವ್ ಅವರನ್ನು ಸಿಬಿಐಯ ಮಧ್ಯಂತರ ನಿರ್ದೇಶಕರನ್ನಾಗಿ ನಿಯೋಜಿಸುವ ಮುನ್ನ ಕೇಂದ್ರ ಉನ್ನತಾಧಿಕಾರ ಸಮಿತಿಯ ಅನುಮತಿ ಪಡೆದುಕೊಂಡಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಮಿತಿ ಶುಕ್ರವಾರ ಸಭೆ ನಡೆಸಲಿದೆ ಎಂಬ ಅಟಾರ್ನಿ ಜನರಲ್ ಅವರ ಪ್ರತಿಪಾದನೆಯನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು. ರಾವ್ ಅವರನ್ನು ಸಿಬಿಐಯ ಮಧ್ಯಂತರ ನಿರ್ದೇಶಕರನ್ನಾಗಿ ನಿಯೋಜಿಸಿರುವುದನ್ನು ಪ್ರಶ್ನಿಸಿ ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News