ಟಿ20ಯಲ್ಲಿ ಅರ್ಧಶತಕ ಬಾರಿಸಿದ ಅತೀ ಕಿರಿಯ ಕ್ರಿಕೆಟಿಗ ನೇಪಾಳದ ಸಂದೀಪ್
Update: 2019-02-01 23:22 IST
ದುಬೈ, ಫೆ.1: ಅಂತರ್‌ರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಕ್ರಿಕೆಟಿಗ ಎಂಬ ದಾಖಲೆ ನೇಪಾಳದ ಸಂದೀಪ್ ಜೊರಾ ಹೆಸರಿಗೆ ಬರೆಯಲ್ಪಟ್ಟಿದೆ. ಗುರುವಾರ ಯುಎಇ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ 17 ವರ್ಷ 103 ದಿನಗಳ ಪ್ರಾಯದ ಸಂದೀಪ್ ಈ ದಾಖಲೆಗೆ ಪಾತ್ರರಾದರು. 46 ಎಸೆತಗಳನ್ನು ಎದುರಿಸಿದ ಅವರು ಅಜೇಯ 53 ರನ್ ಗಳಿಸಿದರು. ಆದರೆ ಈ ಪಂದ್ಯದಲ್ಲಿ ಯುಎಇ 21 ರನ್‌ಗಳಿಂದ ವಿಜಯ ಸಾಧಿಸಿದೆ.
ಈ ಕುರಿತು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ಟ್ವಿಟರ್ ಪೇಜ್‌ನಲ್ಲಿ ಪ್ರಕಟಿಸಿದೆ.
ಮೂರು ಬೌಂಡರಿ ಹಾಗೂ ಏಕೈಕ ಸಿಕ್ಸರ್ ಬಾರಿಸಿದ ಸಂದೀಪ್‌ಗೆ ಯುಎಇ ಗೆಲುವು ತಡೆಯಲು ಸಾಧ್ಯವಾಗಲಿಲ್ಲ. ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ ಪಾಕಿಸ್ತಾನದ ಶಾಹಿದ್ ಆಫ್ರಿದಿ ದಾಖಲೆಯನ್ನು ಮುರಿದು ಆರಂಭದಲ್ಲಿ ನೇಪಾಳದ ರೋಹಿತ್ ಪೌಡೆಲ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲಿ ಅರ್ಧಶತಕ ಬಾರಿಸಿದ ಅತೀ ಕಿರಿಯ ಎನಿಸಿಕೊಂಡಿದ್ದಾರೆ.