ಸಿರಿಯ ಸೇನೆಯ ಮೇಲೆ ಅಮೆರಿಕ ಯುದ್ಧ ವಿಮಾನಗಳ ದಾಳಿ
Update: 2019-02-03 20:56 IST
ಬೈರೂತ್, ಫೆ. 3: ಯೂಫ್ರಟಿಸ್ ನದಿಯ ಪೂರ್ವದಲ್ಲಿರುವ ಐಸಿಸ್ ನಿಯಂತ್ರಣದ ಪ್ರದೇಶವೊಂದರ ವಿರುದ್ಧ ದಾಳಿ ನಡೆಸುತ್ತಿದ್ದ ಸಿರಿಯ ಸೇನೆಯ ಮೇಲೆ ಅಮೆರಿಕ ನೇತೃತ್ವದ ಪಡೆಗಳು ವಾಯು ದಾಳಿ ನಡೆಸಿವೆ ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ಸಿರಿಯದ ಸರಕಾರಿ ಮಾಧ್ಯಮ ವರದಿ ಮಾಡಿದೆ.
‘‘ಡೇಯರ್ ಎಝರ್ ರಾಜ್ಯದ ಆಗ್ನೇಯ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಅಲ್ಬುಕಲಮ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಸಿರಿಯ ಅರಬ್ ಸೇನೆಯ ವಿರುದ್ಧ ಶನಿವಾರ ರಾತ್ರಿ ಅಮೆರಿಕ ಮಿತ್ರಕೂಟದ ಯುದ್ಧ ವಿಮಾನಗಳು ದಾಳಿ ನಡೆಸಿವೆ’’ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಸನ’ ರವಿವಾರ ಹೇಳಿದೆ.
ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಹಾಗೂ ಒಂದು ಫಿರಂಗಿ ನಾಶಗೊಂಡಿದೆ ಎಂದು ಮೂಲವೊಂದು ತಿಳಿಸಿದೆ.