×
Ad

ಭಿಕ್ಷೆ ಬೇಡುತ್ತಿರುವ ನಿವೃತ್ತ ಯೋಧ: ಫೋಟೋ ಶೇರ್ ಮಾಡಿದ ಕ್ರಿಕೆಟಿಗ ಗಂಭೀರ್!

Update: 2019-02-03 21:14 IST

ಹೊಸದಿಲ್ಲಿ,ಫೆ.3: 1965 ಹಾಗೂ 1971ರ ಯುದ್ಧದಲ್ಲಿ ಪಾಲ್ಗೊಂ ನಿವೃತ್ತ ಯೋಧನೊಬ್ಬ ರಾಜಧಾನಿ ಹೊಸದಿಲ್ಲಿಯ ಕನ್ನಾಟ್‌ಪ್ಲೇಸ್‌ನಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಆ ವ್ಯಕ್ತಿಗೆ ನೆರವಾಗುವಂತೆ ರಕ್ಷಣಾ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

ಗಂಭೀರ್ ಅವರು ಟ್ವಿಟರ್‌ನಲ್ಲಿ ನಿವೃತ್ತ ಸೇನಾನಿಯ ಛಾಯಾಚಿತ್ರವನ್ನು ಪ್ರಕಟಿಸಿದ್ದಾರೆ.

‘‘1961 ಹಾಗೂ 1971ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪೀತಾಂಬರನ್ ಅವರಾಗಿದ್ದಾರೆ.ಅವರ ಗುರುತುಚೀಟಿಯಿಂದಲೇ ಅದನ್ನು ದೃಢಪಡಿಸಿಕೊಳ್ಳಬಹುದಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ತನಗೆ ಸೇನೆಯಿಂದ ನೆರವು ಪಡೆಯಲು ಸಾಧ್ಯವಾಗಿಲ್ಲವೆಂದು ಆತ ಹೇಳಿದ್ದಾರೆಂದು’’ ಗಂಭೀರ್ ಟ್ವೀಟಿಸಿದ್ದಾರೆ. ಕನ್ನಾಟ್‌ ಪ್ಲೇಸ್‌ನಲ್ಲಿ ಭಿಕ್ಷೆ ಬೇಡುತ್ತಿರುವ ಈ ವ್ಯಕ್ತಿಗೆ ನೆರವಾಗಬೇಕೆಂದು , ಗಂಭೀರ್ ರಕ್ಷಣಾ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

ಗಂಭೀರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯವು, ಈ ಬಗ್ಗೆ ಕ್ಷಿಪ್ರ ಹಾಗೂ ಪೂರ್ಣ ಮಟ್ಟದ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News