ತುಂಬೆ: ಪಿಎಫ್‌ಐ ಫರಂಗಿಪೇಟೆ ವಲಯದಿಂದ ರಕ್ತದಾನ ಶಿಬಿರ

Update: 2019-02-04 07:50 GMT

ಬಂಟ್ವಾಳ, ಫೆ.4: ಪಿಎಫ್‌ಐ ಫರಂಗಿಪೇಟೆ ವಲಯದ ವತಿಯಿಂದ ಫಾಧರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವು ರವಿವಾರ ನಡೆಯಿತು.

ತುಂಬೆ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ಲತೀಫ್ ಫೈಝಿ ದುಆ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಹಾಗೂ ರಕ್ತದಾನದ ಮಹತ್ವದ ಮಾಹಿತಿ ನೀಡಿದರು.

ಪಿಎಫ್‌ಐ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ರೋಶನ್ ಕ್ರಾಸ್ತಾ, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಕುಮಾರ್, ಪಿಎಫ್‌ಐ ಬಂಟ್ವಾಳ ವಲಯದ ಪ್ರ.ಕಾರ್ಯದರ್ಶಿ ಸಲೀಂ ಕುಂಪನಮಜಲು, ತಂಬೆ ಎಂಜೆಎಂ ಅಧ್ಯಕ್ಷ ಅಬ್ದುಲ್ ರಹಿಮಾನ್ ಅದ್ದಾದಿ, ಆಸ್ಪತ್ರೆಯ ಮೆಡಿಕಲ್ ಇನ್ಚಾರ್ಜ್ ಡಾ.ಕಿರಣ್ ಶೆಟ್ಟಿ, ತುಂಬೆ ಗ್ರಾಪಂ ಸದಸ್ಯ ಝಹೂರ್ ಅಹ್ಮದ್ ತುಂಬೆ, ಪುದು ಗ್ರಾಪಂ ಸದಸ್ಯ ನಝೀರ್, ಪಿಎಫ್‌ಐ ವಲಯಾಧ್ಯಕ್ಷರಾದ ರಶೀದ್ ಆರ್ಕುಳ, ಸಿರಾಜುದ್ದೀನ್, ಎಸ್ಡಿಪಿಐ ಗ್ರಾಮ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝಿಝ್, ಕ್ಯಾಂಪ್ ನಿರ್ವಾಹಕಿ ಡಾ. ಅಲೀಸಾ ಉಪಸ್ಥಿತರಿದ್ದರು.
ಶಿಬಿರದಲ್ಲಿ 92 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು. ಖಾದರ್ ಅಮೆಮಾರ್ ಸ್ವಾಗತಿಸಿ, ಸುಹಾಝ್ ವಂದಿಸಿದರು. ಇರ್ಫಾನ್ ತುಂಬೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News