×
Ad

ಸುನಂದಾ ಪುಷ್ಕರ್ ಸಾವಿನ ಪ್ರಕರಣ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ

Update: 2019-02-04 19:08 IST

ಹೊಸದಿಲ್ಲಿ,ಫೆ.4: ದಿಲ್ಲಿಯ ಹೆಚ್ಚುವರಿ ಮಹಾನಗರ ನ್ಯಾಯಾಲಯವು ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧದ ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಸೋಮವಾರ ಸೆಷನ್ಸ್ ನ್ಯಾಯಾಲಯಕ್ಕೆ ರವಾನಿಸಿದೆ.

ಐಪಿಸಿಯ ಕಲಂ 306(ಆತ್ಮಹತ್ಯೆಗೆ ಪ್ರಚೋದನೆ)ರಡಿ ಅಪರಾಧದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಧೀಶರು ನಡೆಸಬೇಕಾಗುತ್ತದೆ ಎಂದು ತಿಳಿಸಿದ ಹೆಚ್ಚುವರಿ ಮಹಾನಗರ ದಂಡಾಧಿಕಾರಿ ಸಮರ ವಿಶಾಲ್ ಅವರು,ಪ್ರಕರಣವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರಿಗೆ ವರ್ಗಾಯಿಸಿದರು. ಪ್ರಕರಣದಲ್ಲಿಯ ಜಾಗೃತ ವರದಿಯನ್ನು ಕಾದಿಡುವಂತೆ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ಆದೇಶಿಸಿತು.

ಕಲಂ 306 ಅಡಿ ಅಪರಾಧಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಪುಷ್ಕರ್ 2014,ಜ.17ರಂದು ರಾತ್ರಿ ನಗರದ ಐಷಾರಾಮಿ ಹೋಟೆಲ್‌ವೊಂದರ ಕೋಣೆಯಲ್ಲಿ ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ತರೂರ್ ಅವರ ಅಧಿಕೃತ ನಿವಾಸವು ನವೀಕರಣಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ಹೋಟೆಲ್‌ನಲ್ಲಿ ವಾಸವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News