ಉ. ಕೊರಿಯ, ಚೀನಾ ಜೊತೆ ಸಂಬಂಧ ಸುಧಾರಣೆಗೆ ಉತ್ತಮ ಅವಕಾಶ: ಟ್ರಂಪ್

Update: 2019-02-04 16:44 GMT

ವಾಶಿಂಗ್ಟನ್, ಫೆ. 4: ಅಮೆರಿಕದ ಪ್ರಮುಖ ಎರಡು ವಿದೇಶ ನೀತಿ ಸವಾಲುಗಳಾದ ಉತ್ತರ ಕೊರಿಯದ ಪರಮಾಣು ನಿಶ್ಶಸ್ತ್ರೀಕರಣ ಮತ್ತು ಚೀನಾದೊಂದಿಗಿನ ವ್ಯಾಪಾರ ಸಂಬಂಧದಲ್ಲಿ ಒಡಂಬಡಿಕೆ ಏರ್ಪಡುವ ಉತ್ತಮ ಅವಕಾಶಗಳನ್ನು ನಾನು ಕಾಣುತ್ತಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಜೊತೆ ನಡೆಯಲಿರುವ ಎರಡನೇ ಶೃಂಗ ಸಮ್ಮೇಳನದ ಸ್ಥಳ ಮತ್ತು ದಿನಾಂಕ ನಿಗದಿಯಾಗಿದೆ ಹಾಗೂ ಅದನ್ನು ನನ್ನ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣದ ಮುನ್ನ ಅಥವಾ ಭಾಷಣದ ವೇಳೆ ಘೋಷಿಸುವ ಸಾಧ್ಯತೆಯಿದೆ ಎಂದು ರವಿವಾರ ಪ್ರಸಾರವಾದ ಸಿಬಿಎಸ್ ಸುದ್ದಿವಾಹಿನಿಯ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದರು.

ಟ್ರಂಪ್ ಸಂಸತ್ತು ಕಾಂಗ್ರೆಸ್‌ನಲ್ಲಿ ಮಂಗಳವಾರ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣ ಮಾಡಲಿದ್ದಾರೆ.

ಟ್ರಂಪ್-ಕಿಮ್ ಎರಡನೇ ಶೃಂಗ ಸಮ್ಮೇಳನವು ವಿಯೆಟ್ನಾಮ್‌ನಲ್ಲಿ ಈ ತಿಂಗಳ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News