ಅಮೆರಿಕ-ಚೀನಾ ವ್ಯಾಪಾರ ಸಮರದಿಂದ ಇತರ ದೇಶಗಳಿಗೆ ಲಾಭ: ವಿಶ್ವಸಂಸ್ಥೆ

Update: 2019-02-05 17:10 GMT

ಜಿನೇವ, ಫೆ. 5: ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಮರದಿಂದ ಭಾರತ ಸೇರಿದಂತೆ ಹಲವು ದೇಶಗಳು ಪ್ರಯೋಜನ ಪಡೆದಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಪ್ರಮಾಣದಲ್ಲಿ ಆಮದು ತೆರಿಗೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಆ ಬಳಿಕ, ಚೀನಾ ಕೂಡ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ.

ಅಮೆರಿಕ ಮತ್ತು ಚೀನಾ ಪರಸ್ಪರ ವಿಧಿಸಿರುವ ಆಮದು ತೆರಿಗೆಗಳು, ಉಭಯ ದೇಶಗಳ ಉತ್ಪಾದಕರ ಹಿತ ರಕ್ಷಣೆ ಮಾಡಲಾರವು ಎಂದು ಹೇಳಿರುವ ವಿಶ್ವಸಂಸ್ಥೆಯ ಪರಿಣತರು, ವಿವಾದ ಬಗೆಹರಿಯದಿದ್ದರೆ ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಐರೋಪ್ಯ ಒಕ್ಕೂಟವು ಈ ವ್ಯಾಪಾರ ಸಮರದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ಒಕ್ಕೂಟದ ಸದಸ್ಯ ದೇಶಗಳ ರಫ್ತು 70 ಬಿಲಿಯ ಡಾಲರ್‌ನಷ್ಟು ಹೆಚ್ಚುತ್ತದೆ.

ಆಸ್ಟ್ರೇಲಿಯದ ರಫ್ತಿನಲ್ಲಿ 4.6 ಶೇಕಡ ಏರಿಕೆಯಾದರೆ, ಬ್ರೆಝಿಲ್ (3.8 ಶೇ.), ಭಾರತ (3.5 ಶೇ.), ಫಿಲಿಪ್ಪೀನ್ಸ್ (3.2 ಶೇ.) ಮತ್ತು ವಿಯೆಟ್ನಾಮ್ (5 ಶೇ.)ನ ರಫ್ತುಗಳಲ್ಲೂ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News