ನಿಮ್ಮ ವರ್ತನೆ ಸರಿಪಡಿಸಿ: ದೇಶದ ರಾಜಕೀಯ ಪಕ್ಷಗಳಿಗೆ ವಾಟ್ಸ್‌ಆ್ಯಪ್ ಎಚ್ಚರಿಕೆ

Update: 2019-02-06 17:04 GMT

ಹೊಸದಿಲ್ಲಿ,ಫೆ.6: ಲೋಕಸಭಾ ಚುನಾವಣೆಗೂ ಮುನ್ನ ಭಾರತೀಯ ರಾಜಕೀಯ ಪಕ್ಷಗಳು ಖ್ಯಾತ ಸಂದೇಶವಾಹಕ ಸೇವೆ ವಾಟ್ಸ್‌ಆ್ಯಪ್‌ನ ದುರ್ಬಳಕೆ ಮಾಡುತ್ತಿದ್ದು, ಹೀಗೆ ಮಾಡದಂತೆ ಸಾಮಾಜಿಕ ಮಾಧ್ಯಮದ ಹಿರಿಯ ಅಧಿಕಾರಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಸೆಳೆಯುವ ಉದ್ದೇಶದಿಂದ ನಕಲಿ ಸುದ್ದಿಯನ್ನು ಹರಡುವ ಅಥವಾ ಸಾಮೂಹಿಕ ಸಂದೇಶಗಳನ್ನು ರವಾನಿಸಲು ಸ್ವಯಂಚಾಲಿತ ಸಾಧನಗಳನ್ನು ಬಳಸುವ ಬಗ್ಗೆ ವಾಟ್ಸ್‌ಆ್ಯಪ್ ಆತಂಕ ವ್ಯಕ್ತಪಡಿಸಿದೆ. ಆಡಳಿತಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ನ ಕಾರ್ಯಕರ್ತರು ವಾಟ್ಸ್‌ಆ್ಯಪನ್ನು ತಮ್ಮ ಚುನಾವಣಾ ಅಭಿಯಾನದ ತಾಣವಾಗಿ ಬದಲಾಯಿಸಿದ್ದು, ಪರಸ್ಪರರ ಮೇಲೆ ನಕಲಿ ಸುದ್ದಿ ಹರಡುವ ಆರೋಪವನ್ನು ಮಾಡುತ್ತಿದ್ದಾರೆ. ಅನೇಕ ಪಕ್ಷಗಳು ಉದ್ದೇಶಿತವಲ್ಲದ ರೀತಿಯಲ್ಲಿ ವಾಟ್ಸ್‌ಆ್ಯಪನ್ನು ಬಳಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗೆ ಮಾಡುವ ಮೂಲಕ ಅವರು ನಮ್ಮಿಂದ ನಿಷೇಧಕ್ಕೆ ಒಳಗಾಗಬಹುದು ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ವಾಟ್ಸ್‌ಆ್ಯಪ್‌ನ ಸಂಭಾಷಣಾ ಮುಖ್ಯಸ್ಥ ಕಾರ್ಲ್ ವೂಗ್ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ಗೆ ಭಾರತದಲ್ಲಿ ಎದುರಾಗಿರುವ ಸವಾಲು ಹೊಸತೇನೂ ಅಲ್ಲ. ಈ ಹಿಂದೆ ಅಕ್ಟೋಬರ್‌ನಲ್ಲಿ ಬ್ರೆಝಿಲ್‌ನಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲೂ ನಕಲಿ ಸುದ್ದಿಗಳು ಹರಿದಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News