ಉತ್ತರಪ್ರದೇಶ ಬಜೆಟ್: ಗೋಶಾಲೆಗಳಿಗೆ 647 ಕೋ. ರೂ. ಮಂಜೂರು

Update: 2019-02-07 15:19 GMT

ಲಕ್ನೋ, ಫೆ. 9: ಉತ್ತರಪ್ರದೇಶದ ಆದಿತ್ಯನಾಥ್ ಸರಕಾರ ರಾಜ್ಯದಲ್ಲಿರುವ ಗೋಶಾಲೆಗಳ ನಿರ್ವಹಣೆಗೆ 2019-20ರ ಬಜೆಟ್‌ನಲ್ಲಿ 647 ಕೋ. ರೂ. ವೆಚ್ಚ ಮಾಡಲು ಪ್ರಸ್ತಾಪ ಮಾಡಿದೆ. ಉತ್ತರಪ್ರದೇಶದ ಹಣಕಾಸು ಸಚಿವ ರಾಜೇಶ್ ಅಗರ್ವಾಲ್ ಪ್ರಸ್ತುತಪಡಿಸಿದ ವಾರ್ಷಿಕ ಬಜೆಟ್‌ನಲ್ಲಿ 247.60 ಕೋಟಿ ರೂಪಾಯಿಯನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳ ನಿರ್ವಹಣೆಗೆ ಮುಂಜೂರು ಮಾಡಲಾಗಿದೆ.

ಉತ್ತರಪ್ರದೇಶದ ನಗರ ಪ್ರದೇಶದಲ್ಲಿರುವ ‘ಕನ್ಹಾ ಗೋಶಾಲೆ ಹಾಗೂ ಬೆಸಪಹ ಪಶು ಆಶ್ರಮ’ ಯೋಜನೆ ಅಡಿಯಲ್ಲಿ ಗೋಶಾಲೆಗಳ ದುರಸ್ಥಿಗೆ 200 ಕೋ. ರೂ. ಕೂಡ ಮಂಜೂರು ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರು ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ. 2019-20 ವಿತ್ತ ವರ್ಷದಲ್ಲಿ ಒಟ್ಟು ಬಜೆಟ್ ಮಂಜೂರು 4.79 ಲಕ್ಷ ಕೋಟಿ ರೂಪಾಯಿ.

ಇದು ಕಳೆದ ವರ್ಷದ ಬಜೆಟ್‌ಗಿಂತ ಶೇ. 12 ಹೆಚ್ಚು. ಆದಿತ್ಯನಾಥ್ ಸರಕಾರ ಇತ್ತೀಚೆಗೆ ಜಾನುವಾರುಗಳ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದರು. ಇದನ್ನು ಅನುಸರಿಸಿ ಬಜೆಟ್‌ಲ್ಲಿ ಈ ಹಣ ಮಂಜೂರು ಮಾಡಿದ್ದಾರೆ. ಈ ವರ್ಷ ಜನವರಿಯಲ್ಲಿ ರಾಜ್ಯ ಸರಕಾರ ಕಾರ್ಪೊರೇಟ್ ಸಂಸ್ಥೆಗಳು ಕಾರ್ಪೊರೇಟ್ ಉತ್ತರದಾಯಿ ನಿಧಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಲಕ್ಷಿತ ಜಾನುವಾರುಗಳಿಗೆ ಸೌಲಭ್ಯ ಕಲ್ಪಿಸಸಲು ಅವಕಾಶ ನೀಡಿ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News