ಭದ್ರತೆಯಿಲ್ಲದ ಕೃಷಿ ಸಾಲದ ಮಿತಿ 1 ಲಕ್ಷದಿಂದ 1.6 ಲ.ರೂ.ಗೆ ಏರಿಕೆ

Update: 2019-02-07 16:57 GMT

ಹೊಸದಿಲ್ಲಿ,ಫೆ.7: ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ ಆರ್‌ ಬಿಐ ಗುರುವಾರ ಭದ್ರತೆಯಿಲ್ಲದ ಕೃಷಿ ಸಾಲಗಳ ಮೇಲಿನ ಮಿತಿಯನ್ನು ಈಗಿನ ಒಂದು ಲ.ರೂ.ಗಳಿಂದ 1.6 ಲ.ರೂ.ಗಳಿಗೆ ಹೆಚ್ಚಿಸಿದೆ.

ಕೃಷಿ ಸಾಲವನ್ನು ಪುನರ್‌ ಪರಿಶೀಲಿಸಲು ಮತ್ತು ಮತ್ತು ಕಾರ್ಯಸಾಧ್ಯ ನೀತಿ ಪರಿಹಾರವೊಂದನ್ನು ರೂಪಿಸಲು ಆಂತರಿಕ ಕಾರ್ಯ ತಂಡ(ಐಡಬ್ಲ್ಯೂಜಿ)ವನ್ನೂ ಆರ್‌ಬಿಐ ರಚಿಸಿದೆ.

ಹಾಲಿ ಬ್ಯಾಂಕುಗಳು ಒಂದು ಲಕ್ಷ ರೂ.ವರೆಗೆ ಭದ್ರತೆಯಿಲ್ಲದ ಕೃಷಿ ಸಾಲಗಳನ್ನು ನೀಡುತ್ತಿವೆ. ಈ ಮಿತಿಯನ್ನು 2010ರಲ್ಲಿ ನಿಗದಿಗೊಳಿಸಲಾಗಿತ್ತು.

ಒಟ್ಟಾರೆ ಹಣದುಬ್ಬರ ಮತ್ತು ಕೃಷಿವೆಚ್ಚದಲ್ಲಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಭದ್ರತೆಯಿಲ್ಲದ ಸಾಲಗಳ ಮಿತಿಯನ್ನು ಒಂದು ಲ.ರೂ.ಗಳಿಂದ 1.6 ಲ.ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐನ ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಕುರಿತು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News