ಅಸ್ಸಾಂ: ‘ಗೋ ಬ್ಯಾಕ್ ಮೋದಿ’ ಘೋಷಣೆಯೊಂದಿಗೆ ಪ್ರಧಾನಿಗೆ ಸ್ವಾಗತ!

Update: 2019-02-08 17:35 GMT

ಗುವಾಹಟಿ, ಫೆ.8: ಎರಡು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ಅಸ್ಸಾಂಗೆ ಆಗಮಿಸುತ್ತಿದ್ದಂತೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯುನಿಯನ್ (ಎಎಎಸ್ ಯು) ಸದಸ್ಯರು ‘ಗೋ ಬ್ಯಾಕ್ ಮೋದಿ’ ಎಂದು ಘೋಷಣೆ ಕೂಗಿ, ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು.

ಪ್ರಧಾನಿ ರಾಜಭವನಕ್ಕೆ ತೆರಳುತ್ತಿದ್ದಂತೆ ಪ್ರತಿಭಟನಕಾರರು ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎಎಎಸ್ ಯು ಈ ಪ್ರತಿಭಟನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News