ಲಷ್ಕರೆ ತಯ್ಯಬಾ ಸೇರಲು ಪಾಕ್‌ಗೆ ತೆರಳುತ್ತಿದ್ದ ಅಮೆರಿಕ ಪ್ರಜೆಯ ಬಂಧನ

Update: 2019-02-09 17:48 GMT

 ವಾಶಿಂಗ್ಟನ್,ಫೆ.9: ಪಾಕ್ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಬಾ ಸೇರಲು, ಪಾಕಿಸ್ತಾನಕ್ಕೆ ತೆರಳುವ ವಿಮಾನ ಏರಲಿದ್ದ 29 ವರ್ಷ ವಯಸ್ಸಿನ ನ್ಯೂಯಾರ್ಕ್ ನಗರದ ನಿವಾಸಿಯನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.

26/11ರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯೆಂದು ಶಂಕಿಸಲಾಗಿರುವ ಲಷ್ಕರೆತಯ್ಯಬಾ ಗುಂಪು ಅಮೆರಿಕದಲ್ಲೂ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಆತಂಕಕಾರಿ ಬೆಳೆವಣಿಗೆ ಇದಾಗಿದೆಯೆಂದು ಮಾಧ್ಯಮಗಳು ಬಣ್ಣಿಸಿವೆ.

    ಬಂಧಿತ ಆರೋಪಿಯನ್ನು ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್ ಪ್ರದೇಶದ ನಿವಾಸಿ ಜೀಸಸ್ ವಿಲ್‌ಫ್ರೆಡೊ ಎನ್‌ಕಾರ್ನಾಸಿಯೊನ್ ಎಂದು ಗುರುತಿಸ ಲಾಗಿದೆ. ಆತ ಗುರುವಾರ ರಾತ್ರಿ ಜಾನ್ ಎಫ್.ಕೆನಡಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪಾಕಿಸ್ತಾನಕ್ಕೆ ತೆರಳುವ ವಿಮಾನವನ್ನು ಏರುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಎನ್‌ಕಾರ್ನಾಸಿಯೊನ್, ಲಷ್ಕರೆ ತಯ್ಯಬಾ ಸೇರಲು ಆನ್‌ಲೈನ್ ಮೂಲಕ ಪ್ರಯತ್ನಿಸಿದ್ದನೆಂದು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ. ತಾನು ಲಷ್ಕರೆ ತಯ್ಯಬಾ ಗುಂಪನ್ನು ಸೇರಲು ಬಯಸಿರುವುದಾಗಿ ಕಳೆದ ನವೆಂಬರ್‌ನಲ್ಲಿ ಎನ್‌ಕಾರ್ನಿಸಿಯೊನ್ , ಸಹ ಆರೋಪಿಯೊಬ್ಬನ ಜೊತೆ ತಿಳಿಸಿದ್ದಾನೆಂದು ಸಹಾಯಕ ಅಟಾರ್ನಿ ಜನರಲ್ ಜಾನ್ ಡೆಮರ್ಸ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News