ನಿಮ್ಮ ಪಾಸ್‌ಪೋರ್ಟ್ ಎಲ್ಲಿಗೆ ತಲುಪಿದೆ ಎಂದು ಈ ಆ್ಯಪ್ ಮೂಲಕ ತಿಳಿದುಕೊಳ್ಳಿ

Update: 2019-02-10 13:45 GMT

ಪಾಸ್‌ಪೋರ್ಟ್ ಟ್ರಾಕಿಂಗ್ ಮತ್ತು ಸಂಬಂಧಿತ ಸೇವೆಗಳನ್ನು ಸರಕಾರದ ಉಮಂಗ್ ಆ್ಯಪ್‌ನಲ್ಲಿ ಸೇರ್ಪಡೆಗೊಳಿಸಲಾಗಿದ್ದು ,ಈಗ ನಿಮ್ಮ ಪಾಸ್‌ಪೋರ್ಟ್ ಅರ್ಜಿಯ ಸ್ಥಿತಿಗತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉಮಂಗ್ ಆ್ಯಪ್ ಕೇಂದ್ರದ ಹಾಗೂ 17 ರಾಜ್ಯಗಳ 67 ಇಲಾಖೆಗಳ 334 ಸೇವೆಗಳನ್ನು ಒದಗಿಸುತ್ತಿದೆ.

9718397183 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಉಮಂಗ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಕರೆ ಮಾಡಿದ ಕೆಲವೇ ಸೆಕೆಂಡ್‌ಗಳಲ್ಲಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಎಸ್‌ಎಂಎಸ್ ಮೂಲಕ ಲಿಂಕ್ ಒಂದು ವ್ಯಕ್ತಿಯ ಮೊಬೈಲ್‌ಗೆ ರವಾನೆಯಾಗುತ್ತದೆ. ಗೂಗಲ್ ಪ್ಲೇ ಸ್ಟೋರ್,ಆ್ಯಪಲ್ ಸ್ಟೋರ್ ಮತ್ತು ವಿಂಡೋಸ್ ಸ್ಟೋರ್ ಮೂಲಕವೂ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಲ್ಲದೆ ಸರಕಾರವು ಜಾರಿಗೊಳಿಸಿರುವ ಹಲವಾರುಉಪಕ್ರಮಗಳು ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ವಾಸವಿದ್ದರೂ ಯಾವುದೇ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು,ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು ಮತ್ತು ಅಂಚೆಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೂಲಕ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದನ್ನು ಸುಲಭವಾಗಿಸಿವೆ.

ಮೊಬೈಲ್ ಆ್ಯಪ್ ‘ಎಂ ಪಾಸ್‌ಪೋರ್ಟ್ ಸೇವಾ ಆ್ಯಪ್’ ಈಗಾಗಲೇ ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳಿಗಾಗಿ ನೋಂದಣಿ,ಅರ್ಜಿ ಸಲ್ಲಿಸುವಿಕೆ,ಶುಲ್ಕ ಪಾವತಿ ಮತ್ತು ಅಧಿಕಾರಿಗಳೊಂದಿಗೆ ಮುಖತಃ ಭೇಟಿಗೆ ಸಮಯ ನಿಗದಿ ಇತ್ಯಾದಿಗಳಿಗೆ ಸೌಲಭ್ಯವನ್ನೊದಗಿಸುತ್ತಿದೆ.

ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜನನ ದಿನಾಂಕ ಮತ್ತು ವಿಳಾಸದ ಪುರಾವೆಯಾಗಿ ಸರಕಾರವು ನಿಗದಿಗೊಳಿಸಿರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News