×
Ad

ಆರ್ಥಿಕ ದುರ್ಬಲರಿಗೆ ಶೇ. 10 ಮೀಸಲಾತಿ: ವಿವರ ನೀಡಲು ಕೇಂದ್ರ ಸರಕಾರ ನಿರಾಕರಣೆ

Update: 2019-02-10 22:15 IST

ಹೊಸದಿಲ್ಲಿ, ಫೆ. 10: ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡುವ ಪ್ರಕ್ರಿಯೆಯಲ್ಲಿ ತಳೆದ ನಿರ್ಧಾರದ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರ ಸರಕಾರ ನಿರಾಕರಿಸಿದೆ. ಸಂಪುಟದ ದಾಖಲೆಗಳು ಹಾಗೂ ಸಚಿವರ ಚರ್ಚೆಗಳನ್ನು ಬಹಿರಂಗಪಡಿಸುವುದನ್ನು ಮಾಹಿತಿ ಹಕ್ಕು ಕಾಯ್ದೆಯ ನಿರ್ದಿಷ್ಟ ಕಲಂ ನಿಷೇಧಿಸುತ್ತದೆ ಎಂದು ಅದು ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ಅವರ ಕಚೇರಿಯಿಂದ ಸ್ವೀಕರಿಸಲಾದ ಸಂವಹನಗಳಲ್ಲದೆ, ಸಂಪುಟದ ಟಿಪ್ಪಣಿಯ ಪ್ರತಿಯಂತಹ ವಿವರಗಳನ್ನು ಕೋರಿ ಸರಕಾರೇತರ ಸಂಸ್ಥೆ ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನೀಷಿಯೇಟಿವ್‌ನ ಕಾರ್ಯಕ್ರಮ ಸಂಯೋಜಕ ವೆಂಕಟೇಶ್ ನಾಯಕ್ ಮಾಹಿತಿ ಹಕ್ಕು ಕಾಯ್ದೆ ಅಡಿ ಮನವಿ ಸಲ್ಲಿಸಿದ್ದರು.

 ಆರ್ಥಿಕ ದುರ್ಬಲ ವರ್ಗದವರಿಗೆ ಹುದ್ದೆ ಹಾಗೂ ಸೇವೆಗಳಲ್ಲಿ 2019 ಫೆಬ್ರವರಿ 1ರಿಂದ ಶೇ. 10 ಮೀಸಲಾತಿಯನ್ನು ಕೇಂದ್ರ ಸರಕಾರ ಅನುಷ್ಠಾನಗೊಳಿಸಿದೆ. ಕೋರಲಾದ ವಿವರಕ್ಕೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ವಿನಾಯಿತಿ ಇರುವುದರಿಂದ ನೀಡಲು ಸಾಧ್ಯವಿಲ್ಲ ಎಂದು ನಾಯಕ್ ಅವರ ಮನವಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News