ಮೀಸಲು ಅರಣ್ಯಕ್ಕೆ ಗುರು ನಾನಕರ ಹೆಸರು: ಮೆಹಬೂಬರಿಂದ ಪಾಕ್ ಪ್ರಧಾನಿ ಪ್ರಶಂಸೆ

Update: 2019-02-10 17:15 GMT

ಶ್ರೀನಗರ,ಫೆ.10: ನಾನಕಾನಾ ಸಾಹಿಬ್‌ನ ಬಲ್ಲೋಕಿ ಮೀಸಲು ಅರಣ್ಯಕ್ಕೆ ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಅವರ ಹೆಸರನ್ನಿರಿಸಿದ್ದಕ್ಕೆ ಜಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ರವಿವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿ ಟ್ವೀಟಿಸಿದ್ದಾರೆ. ಕೇಂದ್ರದ ವಿರುದ್ಧ ದಾಳಿ ನಡೆಸಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅದರ ಅಗ್ರ ಆದ್ಯತೆಯಾಗಿರುವಂತಿದೆ ಎಂದಿದ್ದಾರೆ.

ಶನಿವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಲ್ಲೋಕಿಯಲ್ಲಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಖಾನ್,ಗುರು ನಾನಕರ ಹೆಸರಿನಲ್ಲಿ ವನ್ಯಜೀವಿ ಮೀಸಲು ಅರಣ್ಯವನ್ನು ಸ್ಥಾಪಿಸುವುದಾಗಿ ಮತ್ತು ನಾನಕಾನಾ ಸಾಹಿಬ್‌ನಲ್ಲಿ ಅವರ ಹೆಸರಿನಲ್ಲಿ ವಿವಿಯೊಂದನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News