ದೇರಳಕಟ್ಟೆಯಲ್ಲಿ ರಕ್ತದಾನ ಶಿಬಿರ

Update: 2019-02-11 06:33 GMT

ಮಂಗಳೂರು, ಫೆ.10: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್ ಮತ್ತು ಎಚ್.ಐ.ಎಂ. ಮದ್ರಸದ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ನ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಫೆ.10ರದು ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಸಭಾಂಗಣದಲ್ಲಿ ಜರುಗಿತು.

ಬದ್ರಿಯಾ ಜಮಾ ಮಸ್ಜಿದ್ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಶಿಬಿರವನ್ನು ಉದ್ಘಾಟಿಸಿದರು. ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಫೈಝಲ್ ಮಂಚಿ, ಶಾಫಿ ಕಿನ್ಯ, ಆರಿಫ್ ಹುಸೈನ್, ಫಾರೂಕ್ ರೆಂಜಾಡಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

 ಮುಖ್ಯ ಅತಿಥಿಗಳಾಗಿ ಕೊಣಾಜೆ ಪೊಲೀಸ್ ಠಾಣೆಯ ನೀರಿಕ್ಷಕ ರವಿ ನಾಯಕ್, ಮೊಯ್ದಿನ್ ಕುಂಞಿ, ಇಸ್ಮಾಯೀಲ್ ಹಾಜಿ, ಕೆ.ಅಬೂಬಕರ್ ಹಾಜಿ, ಇಸ್ಮತ್ ಪಜೀರ್, ಇಲ್ಯಾಸ್ ಹಾಜಿ, ಮುಹಮ್ಮದ್ ಪುಷ್ಟಿ, ಮುಹಮ್ಮದ್ ಶಫೀಕ್, ಕಬೀರ್ ಹಾಜಿ ಡಿ., ಡಾ.ಶರೀಫ್, ಹಮೀದ್ ಹಾಜಿ, ಶಾಫಿ ಕಿನ್ಯ, ಯಾಸರ್, ಆರಿಫ್ ಕಲ್ಕಟ್ಟ, ನೌಶಾದ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಬದ್ರಿಯಾ ಜುಮಾ ಮಸ್ಜಿದ್, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ತ ದಾನ ಶಿಬಿರದಲ್ಲಿ ಒಟ್ಟು 68 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೊಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News