ದಕ್ಷಿಣ ಚೀನಾ ಸಮುದ್ರದಲ್ಲಿ ಅಶಾಂತಿ ಸೃಷ್ಟಿಗೆ ಅಮೆರಿಕ ಯತ್ನ: ಚೀನಾ

Update: 2019-02-11 17:05 GMT

ಬೀಜಿಂಗ್, ಫೆ. 11: ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರ ದ್ವೀಪಗಳ ಬಳಿ ಯುದ್ಧ ನೌಕೆಗಳನ್ನು ಕಳುಹಿಸುವ ಮೂಲಕ ಅಮೆರಿಕವು ಸಮಸ್ಯೆ ಹುಟ್ಟು ಹಾಕಲು ಪ್ರಯತ್ನಿಸುತ್ತಿದೆ ಎಂದು ಚೀನಾ ಸೋಮವಾರ ಆರೋಪಿಸಿದೆ.

ಕ್ಷಿಪಣಿ ನಾಶಕ ನೌಕೆಗಳಾದ ಯುಎಸ್‌ಎಸ್ ಸ್ಪ್ರುವಾನ್ಸ್ ಮತ್ತು ಯುಎಸ್‌ಎಸ್ ಪ್ರೆಬಲ್ ಸೋಮವಾರ ಮುಂಜಾನೆ ಸ್ಪ್ರಾಟ್ಲಿ ದ್ವೀಪಗಳ ಸಮೀಪದಿಂದ ಹಾದು ಹೋಗಿತ್ತು. ಈ ದ್ವೀಪಗಳು ತನ್ನದೆಂದು ಚೀನಾ ಹೇಳುತ್ತಿದೆ.

ಅದೇ ವೇಳೆ, ತನ್ನ ‘ನೌಕಾಯಾನ ಸ್ವಾತಂತ್ರ್ಯ’ದ ಭಾಗವಾಗಿ ಈ ಮಾರ್ಗದಲ್ಲಿ ತನ್ನ ಯುದ್ಧನೌಕೆಗಳು ಹಾದು ಹೋಗಿವೆ ಎಂಬುದಾಗಿ ಅಮೆರಿಕ ಹೇಳಿದೆ.

‘‘ದಕ್ಷಿಣ ಚೀನಾ ಸಮುದ್ರದಲ್ಲಿ ಅಶಾಂತಿ ಮತ್ತು ಉದ್ವಿಗ್ನತೆ ಹುಟ್ಟುಹಾಕಲು ಹಾಗೂ ಶಾಂತಿ ಕದಡಲು ಅಮೆರಿಕ ನಿರ್ಧರಿಸಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News