ಖಶೋಗಿ ಹತ್ಯೆ ಮುಚ್ಚಿಹಾಕುತ್ತಿಲ್ಲ: ಮೈಕ್ ಪಾಂಪಿಯೊ

Update: 2019-02-12 15:14 GMT

ಬುಡಾಪೆಸ್ಟ್ (ಹಂಗೇರಿ), ಫೆ. 12: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯ ಬಗ್ಗೆ ಅಮೆರಿಕ ಈಗಲೂ ತನಿಖೆ ನಡೆಸುತ್ತಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ.

ಖಶೋಗಿ ಹಂತಕರನ್ನು ಶಿಕ್ಷಿಸಲು ಅಮೆರಿಕ ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಅಮೆರಿಕ ಸಂಸದರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.

‘‘ಕೊಲೆಯೊಂದನ್ನು ಅಮೆರಿಕ ಮುಚ್ಚಿ ಹಾಕುತ್ತಿಲ್ಲ’’ ಎಂದು ಹಂಗೇರಿಗೆ ನೀಡಿದ ಭೇಟಿಯ ವೇಳೆ ಪಾಂಪಿಯೊ ಹೇಳಿದರು.

ಅಮೆರಿಕದಲ್ಲಿ ವಾಸಿಸುತ್ತಿದ್ದ ಸೌದಿ ಪತ್ರಕರ್ತನ ಕೊಲೆಗೆ ಕಾರಣರಾದ ಎಲ್ಲರ ಮೇಲೂ ಉತ್ತರದಾಯಿತ್ವ ಹೊರಿಸಲು ಅಮೆರಿಕ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.

ತನ್ನ ಮದುವೆಗಾಗಿ ಸೌದಿ ಅರೇಬಿಯದ ದಾಖಲೆಗಳನ್ನು ತರುವುದಕ್ಕಾಗಿ ಖಶೋಗಿ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿ ಪ್ರವೇಶಿಸಿದ್ದರು. ಅಲ್ಲಿಂದ ಅವರು ಹಿಂದಿರುಗಿಲ್ಲ.

ಸೌದಿ ಅರೇಬಿಯದ 15 ಸದಸ್ಯರ ಹಂತಕ ತಂಡವೊಂದು ಕೌನ್ಸುಲೇಟ್ ಕಚೇರಿಯಲ್ಲೇ ಪತ್ರಕರ್ತನನ್ನು ಕೊಂದು ಅವರ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News