×
Ad

ಕಪಿಲ್ ಸಿಬಲ್ ಡಬಲ್ ರೋಲ್: ಕೋರ್ಟ್ ಒಳಗೆ ಅಂಬಾನಿ ಪರ, ಹೊರಗೆ ಅಂಬಾನಿ ವಿರೋಧಿ!

Update: 2019-02-12 21:11 IST

ರಾಜಕಾರಣಿಗಳು ಜನರನ್ನು ಮರುಳು ಮಾಡುವುದರಲ್ಲಿ ಜಾಣರು. ಆದರೆ ಕಾಂಗ್ರೆಸ್ ನ ಮಾತಿನ ಮಲ್ಲ ಕಪಿಲ್ ಸಿಬಲ್ ಜಾಣರಲ್ಲೇ ಮಹಾಜಾಣ ರಾಜಕಾರಣಿ. ಹಾಗಾಗಿ ಅವರು ವೃತ್ತಿ , ಪ್ರವೃತ್ತಿ ಎರಡರಲ್ಲೂ ಮಿಂಚುತ್ತಾರೆ, ಏಳಿಗೆಯ ಏಣಿ ಹತ್ತುತ್ತಲೇ ಹೋಗುತ್ತಾರೆ. ಅದಕ್ಕೆ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ.

ಮಂಗಳವಾರವೇ ನೋಡಿ. ಸಿಬಲ್ ಸಾಹೇಬರು ಭಾರೀ ಬ್ಯುಸಿ ಇದ್ದರು. ಬೆಳಗ್ಗೆಯೇ ಕಪ್ಪು ಕೋಟು ಹಾಕಿಕೊಂಡು ಸುಪ್ರೀಂ ಕೋರ್ಟ್ ಗೆ ಹೋಗಿ ದೇಶದ ಅತ್ಯಂತ ಸಿರಿವಂತ ಉದ್ಯಮಿಗಳಲ್ಲಿ ಒಬ್ಬರಾದ ಅನಿಲ್ ಅಂಬಾನಿ ಪರ ವಕಾಲತ್ತು ಮಾಡಿದರು. ಅದರ ಜೊತೆಜೊತೆಯೇ ಕಾಂಗ್ರೆಸ್ ನಾಯಕನಾಗಿಯೂ ತನ್ನ ಕರ್ತವ್ಯ ನಿರ್ವಹಿಸಿದರು. ಅದೇ ಅನಿಲ್ ಅಂಬಾನಿ ವಿರುದ್ಧ ಟ್ವಿಟರ್ ನಲ್ಲಿ ಟೀಕಾಪ್ರಹಾರ ನಡೆಸಿದರು ! ಅರೆ ...  ಹೌದು, ಅವರೇ ಇವರು ಇವರೇ ಅವರು !

ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ  ಎರಿಕ್ಸನ್ ಇಂಡಿಯಾ ಅನಿಲ್ ಅಂಬಾನಿ ವಿರುದ್ಧ ಹಾಕಿರುವ ಪ್ರಕರಣದಲ್ಲಿ ಅನಿಲ್ ಪರ ವಾದಿಸಿದರು ಸಿಬಲ್. ಅದೇ ಹೊತ್ತಿಗೆ ರಫೇಲ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಮಾಡಿರುವ ಗಂಭೀರ ಆರೋಪವನ್ನು ಬೆಂಬಲಿಸಿ ಅನಿಲ್ ಅಂಬಾನಿ ಹೆಸರು ಬಳಸಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಅಲ್ಲಿ ವಕೀಲನಾಗಿ ಅಂಬಾನಿಯಿಂದ ದೊಡ್ಡ ಮೊತ್ತವನ್ನು ಜೇಬಿಗಿಳಿಸಿ ಇನ್ನಷ್ಟು ಸಿರಿವಂತರಾದರು. ಇಲ್ಲಿ ಅದೇ ಅಂಬಾನಿ ವಿರುದ್ಧ ಟೀಕೆ ಮಾಡಿ ಪಕ್ಷದಲ್ಲೂ ಮಿಂಚಿದರು. ಹೇಗಿದೆ ಸಿಬಲ್ ಸಾಹೇಬರ ಜಾಣತನ? …

ಆದರೆ ಈಗ ಜನರೂ ಅಲ್ಪಸ್ವಲ್ಪ ಜಾಣರಾಗುತ್ತಿದ್ದರೆ. ಹಾಗಾಗಿ ಸಿಬಲ್ ರ ಡಬಲ್ ರೋಲ್ ಅನ್ನು ಗಮನಿಸಿ ಟ್ವಿಟ್ಟರ್ ನಲ್ಲಿ ಕಾಲೆಳೆದರು. ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News