ಇನ್ನು 50 ವರ್ಷದಲ್ಲಿ ಬಂಗಾಳಿ ಹುಲಿಗಳ ಅಳಿವು: ವಿಜ್ಞಾನಿಗಳ ಎಚ್ಚರಿಕೆ

Update: 2019-02-13 14:56 GMT

ಮೆಲ್ಬರ್ನ್, ಫೆ. 13: ಬಂಗಾಳಿ ಹುಲಿಗಳ ಕೊನೆಯ ಕರಾವಳಿ ಆಶ್ರಯತಾಣ ಹಾಗೂ ಜಗತ್ತಿನ ಅತಿ ದೊಡ್ಡ ಮ್ಯಾನ್‌ಗ್ರೂವ್ ಕಾಡು ‘ಸುಂದರ್ ‌ಬನ್ಸ್’ ಹವಾಮಾನ ಬದಲಾವಣೆ ಮತ್ತು ಏರುತ್ತಿರುವ ಸಮುದ್ರ ಮಟ್ಟದಿಂದಾಗಿ ಇನ್ನು 50 ವರ್ಷಗಳಲ್ಲಿ ನಾಶವಾಗಬಹುದಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

10,000 ಚದರ ಕಿಲೋಮೀಟರ್‌ಗೂ ಅಧಿಕ ಪ್ರದೇಶದಲ್ಲಿ ವ್ಯಾಪಿಸಿರುವ ಬಾಂಗ್ಲಾದೇಶ ಮತ್ತು ಭಾರತದ ಸುಂದರ್‌ಬನ್ಸ್ ವಲಯವು ಭೂಮಿಯ ಮೇಲಿನ ಅತಿ ದೊಡ್ಡ ಮ್ಯಾನ್‌ಗ್ರೂವ್ ಕಾಡಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಇಲ್ಲಿ ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳು ವಾಸಿಸುತ್ತಿವೆ.

‘‘ಇಂದು 4,000ಕ್ಕೂ ಕಡಿಮೆ ಬಂಗಾಳ ಹುಲಿಗಳು ಇವೆ’’ ಎಂದು ಆಸ್ಟ್ರೇಲಿಯದ ಜೇಮ್ಸ್ ಕುಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಬಿಲ್ ಲಾರೆನ್ಸ್ ಹೇಳುತ್ತಾರೆ.

‘‘ಇದು ಜಗತ್ತಿನ ಅತಿ ದೊಡ್ಡ ಬೆಕ್ಕಿನ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಒಂದು ಕಾಲದಲ್ಲಿ ಅವುಗಳು ಹೇರಳವಾಗಿ ಈ ಕಾಡಿನಲ್ಲಿ ಜೀವಿಸುತ್ತಿದ್ದವು. ಆದರೆ, ಇಂದು ಅವುಗಳು ಭಾರತ ಮತ್ತು ಬಾಂಗ್ಲಾದೇಶಗಳ ಸಣ್ಣ ಪ್ರದೇಶಕ್ಕೆ ಸೀಮಿತವಾಗಿವೆ’’ ಎಂದು ಅವರು ಹೇಳಿದರು.

‘‘ಎಲ್ಲಕಿಂತ ಹೆಚ್ಚಿನ ಆಘಾತಕಾರಿ ಸಂಗತಿಯೆಂದರೆ, ನಮ್ಮ ವಿಶ್ಲೇಷಣೆಯ ಪ್ರಕಾರ, ಸುಂದರಬನ್ಸ್‌ನಲ್ಲಿರುವ ಹುಲಿಗಳ ವಾಸಸ್ಥಾನವು 2070ರ ವೇಳೆಗೆ ಸಂಪೂರ್ಣವಾಗಿ ನಾಶವಾಗುತ್ತದೆ’’ ಎಂದು ಬಾಂಗ್ಲಾದೇಶದ ಇಂಡಿಪೆಂಡೆಂಟ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ಶರೀಫ್ ಮುಕುಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News