ತಾಜ್ ಮಹಲ್ ಕಳಪೆ ನಿರ್ವಹಣೆ: ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ತರಾಟೆ

Update: 2019-02-13 16:42 GMT

ಶ್ರೀನಗರ, ಫೆ. 13: ತಾಜ್‌ಮಹಲ್‌ನ ಕಳಪೆ ನಿರ್ವಹಣೆ ಬಗ್ಗೆ ಉತ್ತರಪ್ರದೇಶ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಸ್ಮಾರಕವನ್ನು ಸಂರಕ್ಷಿಸಲು ಗಂಭೀರತೆ ತೋರಿಸಿ ಎಂದು ಸೂಚಿಸಿದೆ.

ಸ್ಮಾರಕದ ಸಂರಕ್ಷಣೆಗೆ ತೆಗೆದುಕೊಳ್ಳಲು ಬಯಸುವ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ನೂತನ ‘ದೃಷ್ಟಿ ದಾಖಲೆ’ಯನ್ನು ನೀಡುವಂತೆ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಇಬ್ಬರು ಸದಸ್ಯರ ನ್ಯಾಯಪೀಠ ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರಕ್ಕೆ ಸೂಚಿಸಿದೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಅನ್ನು ಸಂರಕ್ಷಿಸಲು ಹಾಗೂ ನಿರ್ವಹಿಸಲು ನಾವು ತುಂಬಾ ಗಂಭೀರವಾಗಬೇಕು ಹಾಗೂ ಕಾಳಜಿ ವಹಿಸಬೇಕು ಎಂದು ಪ್ರಕರಣದ ವಿಚಾರಣೆ ನಡೆಸಿದ ಪೀಠ ಹೇಳಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ಪುರಾತತ್ವ ಇಲಾಖೆ ತನ್ನ ಸಮೀಕ್ಷಾ ವರದಿಯಲ್ಲಿ ಆಗ್ರಾದ ಮಾಲಿನ್ಯದಿಂದಾಗಿ ತಾಜ್‌ಮಹಲ್ ಬಣ್ಣ ಮಸುಕಾಗುತ್ತಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News