ಧರ್ಮಸ್ಥಳ: ಪಂಚಮಹಾವೈಭವದ ಪೆಂಡಾಲ್ ಕುಸಿತ

Update: 2019-02-14 11:17 GMT

ಬೆಳ್ತಂಗಡಿ, ಫೆ. 14: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ವೇದಿಕೆಯೊಂದರ ಚಪ್ಪರ ಕುಸಿದು ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಮಸ್ತಕಾಭಿಷೇಕ ಕಾರ್ಯಕ್ರಮ ಪ್ರಯುಕ್ತ ಪಂಚಮಹಾವೈಭವ ನಡೆಯುತ್ತಿದ್ದ ವೇದಿಕೆಗೆ ಹಾಕಿದ್ದ ಪೆಂಡಾಲ್  ಕುಸಿದು ಬಿದ್ದು ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ವಯಂಸೇವಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಇಂದು ಮಧ್ಯಾಹ್ನದ ಸುಮಾರಿಗೆ ತಗಡು ಶೀಟುಗಳಿಂದ ನಿರ್ಮಿಸಲಾಗಿದ್ದ ಈ ಪೆಂಡಾಲ್ ನ ಬಹುಭಾಗ ಕುಸಿದುಬಿದ್ದಿರುವುದಾಗಿ ಹೇಳಲಾಗಿದೆ.

ಚಪ್ಪರದ ಕೆಳಗೆ ಯಾರೂ ಸಿಲುಕಿಲ್ಲ: ದ.ಕ. ಎಸ್ಪಿ

ಈ ಬಗ್ಗೆ ಸ್ಪಷ್ಟನೆ ನೀಡಿರುವ ದ.ಕ. ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಧರ್ಮಸ್ಥಳದ ಪಂಚಮಹಾವೈಭವದ ಚಪ್ಪರ ಕುಸಿತದಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಪ್ಪರದ ಕೆಳಗೆ ಯಾರೂ ಸಿಲುಕಿಲ್ಲ. ಘಟನೆ ನಡೆದಾಗ ಅಲ್ಲಿ ಯಾವುದೇ ಘಟನೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News