ಬಂಟ್ವಾಳ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ; ಆರೋಪಿ ಸೆರೆ

Update: 2019-02-14 10:00 GMT
ಸುಜೀತ್

ಬಂಟ್ವಾಳ, ಫೆ. 14: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಮಾಡಿ ಬಳಿಕ ನಿರಾಕರಿಸಿದ ಆರೋಪದಲ್ಲಿ ಯುವಕ ನೋರ್ವನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ನಿವಾಸಿ, ಕಲ್ಲಿನ ಕೋರೆಯ ಇಟಾಚಿ ಆಪರೇಟರ್ ಸುಜೀತ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಮೂಲತಃ ಬಾಗಲಕೋಟೆ ಜಿಲ್ಲೆಯ ಸಂತ್ರಸ್ಥೆ ಯುವತಿ ಸುಮಾರು 2 ವರ್ಷಗಳಿಂದ ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿರುವ ಕಲ್ಲಿನ ಕೋರೆಯಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದು, ಇಲ್ಲಿಯೇ ಕಲ್ಲಿನ ಕೋರೆಯಲ್ಲಿ ಇಟಾಚಿ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸುಜೀತ್ ಎಂಟು ತಿಂಗಳಿನಿಂದ ಸಂತ್ರಸ್ಥೆಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ, ಆತ್ಯಾಚಾರ ಮಾಡಿದ್ದು, ನಂತರ ಮದುವೆಯಾಗಲು ನಿರಾಕರಿಸಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News