ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆ: ಫೆ. 19ರಂದು ಮಜ್ಲಿಸ್ ನ್ನೂರ್ ಮಹಾ ಸಂಗಮ

Update: 2019-02-14 10:15 GMT

ಬಂಟ್ವಾಳ, ಫೆ. 14: ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆ ವತಿಯಿಂದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತಪ್ರವಚನ ಹಾಗೂ ಮಜ್ಲಿಸ್ ನ್ನೂರ್ ಮಹಾ ಸಂಗಮವು ಫೆ. 19ರಂದು ಸಂಜೆ ಕನ್ಯಾನ ಗೋಳಿಕಟ್ಟೆಯಲ್ಲಿ ನಡೆಯಲಿದ್ದು, ಅಂತರಾಷ್ಟ್ರೀಯ ಪ್ರಭಾಷಣಗಾರ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಇಬ್ರಾಹಿಂ ಕಡವ ಬೀಟಿಗೆ ತಿಳಿಸಿದ್ದಾರೆ.

ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆ ಪ್ರಾರಂಭಗೊಂಡು ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ತನ್ನದೇ ಆದ ಛಾಪನ್ನು ಹೊಂದಿದೆ. ಹಲವು ಸಹಾಯಧನಗಳನ್ನು ವಿತರಿಸುತ್ತಿದೆ. ಇದೀಗ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ ಎಂದು ತಿಳಿಸಿದರು. 

ಬೆಳಿಗ್ಗೆ ಸ್ವಾಗತ ಸಮಿತಿ ಚೇಯರ್‍ಮೆನ್ ಎಸ್.ಕೆ ಉಮರ್ ಉಸ್ತಾದ್ ಕನ್ಯಾನ ಧ್ವಜಾರೋಹಣ ನೆರವೇರಿಸುವರು. ಹಮೀದ್ ಮುಸ್ಲಿಯಾರ್ ಕೊನಾಲೆ ಕನ್ಯಾನ ದುವಾಃ ಆಶೀರ್ವಚನ ನೀಡುವರು. ಸಂಜೆ ಶಾಹುಲ್ ಹಮೀದ್ ವಲಿಯುಲ್ಲಾಹಿ ಝಿಯಾರತ್‍ಗೆ ಕೆ.ಎಸ್ ಅಲಿ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮಜ್ಲಿಸುನ್ನೂರು ಮಹಾ ಸಂಗಮದಲ್ಲಿ ಸೈಯದ್ ಅಮೀರ್ ತಂಙಳ್ ಕಿನ್ಯ ದುಆಃ ಆರ್ಶೀರ್ವಚನ ನೀಡಲಿದ್ದಾರೆ. ಶೈಖುನಾ ಎಂ.ಎ ಖಾಸಿಂ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.

ಐತಿಹಾಸಿಕ ಮಹಾಸಂಗಮವನ್ನು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದುಲ್ ಉಲಮಾ ಜಿಫ್ರಿ ಮುತ್ತು ಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸೈಯದ್ ಬಾತಿಷ ತಂಙಳ್ ಆನೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಮರ್ ಮುಸ್ಲಿಯಾರ್, ಅಬೂಬಕರ್ ಅಂಗ್ರಿ, ಕಲಂದರ್ ಕುಕ್ಕಾಜೆ, ಶರೀಫ್ ಕೆಲಿಂಜ, ಬಶೀರ್ ಬೈರಿಕಟ್ಟೆ, ಮಜೀದ್ ಕನಿಯೂರು ವಿ., ಅಬ್ದುಲ್ ಖಾದರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News