ಕಸ,ತ್ಯಾಜ್ಯ ಸಂಗ್ರಹದ ನಿವೇಶನದ ಆಯ್ಕೆ : ಗ್ರಾಮಸ್ಥರಿಂದ ವಿರೋಧ

Update: 2019-02-14 12:48 GMT

ಭಟ್ಕಳ,ಫೆ.14: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಸ, ತ್ಯಾಜ್ಯ ಸಾಗಿಸಲು ಖಾಸಗಿಯವರೇ ವಾಹನವನ್ನುದೇಣಿಗೆ ನೀಡಿದ ನಂತರ ಇಲ್ಲಿನ ಕಸವಿಲೇವಾರಿ ಸಮಸ್ಯೆ ಬಗೆ ಹರಿಯಿತು ಎಂದುಕೊಂಡ ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳು ಇದೀಗ ಕಸ, ತ್ಯಾಜ್ಯ ಸಂಗ್ರಹದ ನಿವೇಶನದ ಆಯ್ಕೆಗೆ ಸಂಬಂಧಿಸಿದಂತೆ ಜನರಿಂದ ಪ್ರತಿರೋಧ ಎದುರಿಸುವಂತಾಗಿದೆ.

ಹೆಬಳೆ ಗ್ರಾಮ ಪಂಚಾಯತದ ಹನೀಫಾಬಾದ್ ಹಾಗೂ ಜಾಮೀಯಾಬಾದ್ ಭಾಗಗಳಲ್ಲಿ ಅಲ್ಲಿನ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಅಲ್ಲಿನ ಖಾಲಿ ನಿವೇಶಗಳನ್ನು ಪಂಚಾಯತ್ ಆಡಳಿತ ಗುರುತಿಸಿತ್ತು.  ಈ ಜಾಗದಲ್ಲಿ ಕಸ, ತ್ಯಾಜ್ಯಗಳನ್ನು ಸುರಿಯಲು ಬಂದ ಹೊಸ ವಾಹನವನ್ನುಕಂಡೊಡನೆ ಸುತ್ತಮುತ್ತಲಿನ ಜನರು, ಮತ್ತೆ ಇಲ್ಲಿ ವಾಹನ ಬಂದರೆ ಕಲ್ಲು ಹೊಡೆಯುವುದಾಗಿ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಪಂಚಾಯತ್ ಆಯ್ಕೆ ಮಾಡಿಕೊಂಡಿರುವ ನಿವೇಶನ ಸರಿಯಾದುದಲ್ಲ. ಶ್ವಾನ ಮತ್ತು ಜಾನುವಾರುಗಳು ತ್ಯಾಜ್ಯಗಳ ಮೇಲೆ ಉರುಳಾಡಿ ಹೊರಗೆ ಬರುವುದರಿಂದ ಜನರು ಆತಂಕ ಎದುರಿಸಬೇಕಾಗುತ್ತದೆ. ಸುತ್ತಮುತ್ತ ಮನೆಗಳು, ಶಾಲೆಗಳಿವೆ. ನಿತ್ಯವೂ ಅಕ್ಕಪಕ್ಕದ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಓಡಾಡುತ್ತಾರೆ. ಕಸ ಸಂಗ್ರಹಿಸಲು ನಮ್ಮಿಂದ  ಹಣ ಪಡೆದು ನಮ್ಮ ಮನೆಯ ಅಕ್ಕಪಕ್ಕದಲ್ಲಿ ಕಸ ಎಸೆಯುವುದಾದರೆ ಈ ವಿಲೇವಾರಿ ಕಾರ್ಯ ಯಾಕೆ, ನಾವೇ ನಮ್ಮ ಮನೆಯ ಕಸ, ತ್ಯಾಜ್ಯಗಳನ್ನು ತಂದು ಇಲ್ಲಿಗೆ ಎಸೆದು ಹೋಗಬಹುದಲ್ಲವೇ ಎಂದು ಆಕ್ರೋಶವನ್ನು ಹೊರ ಹಾಕಿದರು.
ಮೊದಲು ಊರಿನಾಚೆ ಸರಿಯಾದ ಪ್ರದೇಶವನ್ನುಆಯ್ಕೆ ಮಾಡಿಕೊಳ್ಳಿ, ನಂತರ ಕಸ ವಿಲೇವಾರಿಯ ಬಗ್ಗೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಇದರಿಂದ ಹೆಬಳೆಯಲ್ಲಿ ಕಸವಿಲೇವಾರಿಕಾರ್ಯ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಕಂಡು ಬಂದಿದೆ.

2 ದಿನಗಳ ಹಿಂದೆಯಷ್ಟೇ ಭಟ್ಕಳ ವಿಮೆನ್ ಸೆಂಟರ್ ಹೆಬಳೆ ಕಸ ವಿಲೇವಾರಿಗಾಗಿ ವಾಹನವೊಂದನ್ನುದೇಣಿಗೆಯಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News