ಪಾಕ್ ಪ್ರಯಾಣ ಮರುಪರಿಶೀಲಿಸಿ: ತನ್ನ ಪ್ರಜೆಗಳನ್ನು ಒತ್ತಾಯಿಸಿದ ಅಮೆರಿಕ

Update: 2019-02-14 14:47 GMT

ವಾಶಿಂಗ್ಟನ್, ಫೆ. 14: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಹಾಗೂ ದೇಶದ ಒಳಗೆ ಅಥವಾ ಸನಿಹದಲ್ಲಿ ಹಾರುವ ಪ್ರಯಾಣಿಕ ವಿಮಾನಗಳಿಗೆ ಎದುರಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಪ್ರಯಾಣ ಕೈಗೊಳ್ಳುವುದನ್ನು ಮರುಪರಿಶೀಲಿಸುವಂತೆ ಅಮೆರಿಕ ತನ್ನ ನಾಗರಿಕರನ್ನು ಒತ್ತಾಯಿಸಿದೆ.

ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿರುವುದನ್ನು ಈಗಲೂ ಮುಂದುವರಿಸಿವೆ ಎಂದು ಕೇಂದ್ರೀಯ ವಿಮಾನಯಾನ ಇಲಾಖೆ ಬುಧವಾರ ಬಿಡುಗಡೆಗೊಳಿಸಿದ ನೋಟಿಸ್‌ನಲ್ಲಿ ತಿಳಿಸಿದೆ.

‘‘ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸಿ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೊಸ ಪ್ರಯಾಣ ಮಾರ್ಗದರ್ಶಿಕೆಯಲ್ಲಿ ತಿಳಿಸಿದೆ.

ಬಲೂಚಿಸ್ತಾನ, ಖೈಬರ್ ಪಖ್ತೂಂಖ್ವ (ಕೆಪಿಕೆ) ರಾಜ್ಯಗಳು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗುವುದನ್ನು ನಿವಾರಿಸುವಂತೆ ಅದು ಅಮೆರಿಕನ್ನರಿಗೆ ಸೂಚಿಸಿದೆ.

‘‘ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಯಾವುದೇ ಮುನ್ಸೂಚನೆಯಿಲ್ಲದೆ ಪ್ರಯಾಣ ಕೇಂದ್ರಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಸೇನಾ ನೆಲೆಗಳು, ವಿಮಾನ ನಿಲ್ದಾಣಗಳು, ವಿಶ್ವವಿದ್ಯಾನಿಲಯಗಳು, ಪ್ರವಾಸಿ ಕೇಂದ್ರಗಳು, ಶಾಲೆಗಳು, ಆಸ್ಪತ್ರೆಗಳು, ಆರಾಧನಾ ಸ್ಥಳಗಳು ಮತ್ತು ಸರಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಬಹುದಾಗಿದೆ’’ ಎಂದು ಮಾರ್ಗದರ್ಶಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News