ನೂರು ವರ್ಷದಲ್ಲಿ ಮೊದಲ ಬಾರಿಗೆ ಕಪ್ಪು ಚಿರತೆಯ ಅಸ್ತಿತ್ವ ಪತ್ತೆ

Update: 2019-02-14 15:24 GMT

ನೈರೋಬಿ (ಕೆನ್ಯ), ಫೆ. 14: ಮರೆಯಾಗಿದ್ದ ಕಪ್ಪು ಚಿರತೆಯನ್ನು ಪತ್ತೆಹಚ್ಚಲಾಗಿದೆ ಎಂಬ ವದಂತಿಗಳು ಮಧ್ಯ ಕೆನ್ಯದಲ್ಲಿ ಹಲವು ಸಮಯದಿಂದ ಹರಿದಾಡುತ್ತಿದ್ದವು. ಈಗ ಗುಪ್ತ ಕ್ಯಾಮರಗಳಿಂದ ತೆಗೆದ ಕಪ್ಪು ಚಿರತೆಯೊಂದರ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಅವುಗಳ ಉಪಸ್ಥಿತಿಯನ್ನು ವಿಜ್ಞಾನಿಗಳು ಖಾತರಿಪಡಿಸಿದ್ದಾರೆ.

ಲೊಯಿಸಾಬ ವನ್ಯಜೀವಿ ಅಭಯಾರಣ್ಯದಲ್ಲಿರುವ ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಅಮೆರಿಕದ ಸ್ಯಾನ್‌ಡೀಗೊ ಪ್ರಾಣಿ ಸಂಗ್ರಹಾಲಯದ ಸಂಶೋಧಕರು ಈ ಚಿತ್ರಗಳನ್ನು ತೆಗೆದಿದ್ದಾರೆ.

‘‘ಕಪ್ಪು ಚಿರತೆಗಳ ಚಿತ್ರಗಳನ್ನು ನಮ್ಮ ಕ್ಯಾಮರಗಳು ತೆಗೆದಿರುವ ಸುದ್ದಿಯನ್ನು ಕೇಳಿ ನಾವು ರೋಮಾಂಚನಗೊಂಡಿದ್ದೇವೆ’’ ಎಂದು ಅಭಯಾರಣ್ಯವು ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಈ ಚಿರತೆಗಳ ಸಂತತಿ ಅಳಿದುಹೋಗಿದೆ ಎಂಬುದಾಗಿ ಈವರೆಗೆ ಭಾವಿಸಲಾಗಿತ್ತು.

 ಆಫ್ರಿಕದಲ್ಲಿ ಕಪ್ಪು ಚಿರತೆಯ ಅಸ್ತಿತ್ವದ ಬಗ್ಗೆ ಒಂದು ಶತಮಾನದ ಅವಧಿಯಲ್ಲಿ ನಮಗೆ ಸಿಕ್ಕ ಮೊದಲ ವೈಜ್ಞಾನಿಕ ಪುರಾವೆ ಈ ಚಿತ್ರಗಳಾಗಿವೆ ಎಂದು ಸ್ಯಾನ್ ಡೀಗೊ ಮೃಗಾಲಯದ ಸಂಶೋಧಕ ನಿಕೊಲಸ್ ಪಿಲ್ಫೋಲ್ಡ್ ನೇತೃತ್ವದಲ್ಲಿ ನಡೆದ ಅಧ್ಯಯನ ಹೇಳಿದೆ.

ಅಧ್ಯಯನದ ಫಲಿತಾಂಶವನ್ನು ‘ಆಫ್ರಿಕನ್ ಜರ್ನಲ್ ಆಫ್ ಇಕಾಲಜಿ’ಯಲ್ಲಿ ಜನವರಿಯಲ್ಲಿ ಪ್ರಕಟಿಸಲಾಗಿದೆ.

ಇದಕ್ಕಿಂತ ಮೊದಲು ಕಪ್ಪು ಚಿರತೆಗಳ ಚಿತ್ರವನ್ನು 1909ರಲ್ಲಿ ಅಡಿಸ್ ಅಬಾಬದಲ್ಲಿ ತೆಗೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News