ರಶ್ಯ ಕುರಿತ ತನಿಖೆಯಲ್ಲಿ ಟ್ರಂಪ್ ಸಹಾಯಕ ಸುಳ್ಳು ಹೇಳಿದ್ದಾರೆ: ನ್ಯಾಯಾಲಯದ ತೀರ್ಪು

Update: 2019-02-14 15:59 GMT

ವಾಶಿಂಗ್ಟನ್, ಫೆ. 14: 2016ರ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು ರಶ್ಯದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪದ ಬಗ್ಗೆ ವಿಶೇಷ ವಕೀಲರು ನಡೆಸುತ್ತಿರುವ ತನಿಖೆಗೆ ಸಂಬಂಧಿಸಿ, ಟ್ರಂಪ್‌ರ ಮಾಜಿ ಪ್ರಚಾರ ಮುಖ್ಯಸ್ಥ ಪೌಲ್ ಮ್ಯಾನಫೋರ್ಟ್ ಉದ್ದೇಶಪೂರ್ವಕವಾಗಿ ತನಿಖಾಧಿಕಾರಿಗಳು ಮತ್ತು ನ್ಯಾಯಮಂಡಳಿಯೆದುರು ಸುಳ್ಳು ಹೇಳಿದ್ದಾರೆ ಎಂದು ನ್ಯಾಯಾಧೀಶರೊಬ್ಬರು ಬುಧವಾರ ಹೇಳಿದ್ದಾರೆ.

ಇದು ಒಂದು ಕಾಲದ ಶ್ರೀಮಂತ ರಾಜಕೀಯ ಸಲಹೆಗಾರನಿಗೆ ಎದುರಾದ ಇನ್ನೊಂದು ಹಿನ್ನಡೆಯಾಗಿದೆ. ಅವರೀಗ ವಿಶೇಷ ವಕೀಲ ರಾಬರ್ಟ್ ಮಲ್ಲರ್ ಹೂಡಿರುವ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಹಲವು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ಜೈಲು ಶಿಕ್ಷೆಯಲ್ಲಿ ಕಡಿತವನ್ನು ಎದುರು ನೋಡುತ್ತಿದ್ದ ಮ್ಯಾನಪೋರ್ಟ್ ‌ರ ಲೆಕ್ಕಾಚಾರವನ್ನು ಜಿಲ್ಲಾ ನ್ಯಾಯಾಧೀಶ ಆ್ಯಮಿ ಬರ್ಮನ್ ಜಾಕ್ಸನ್ ‌ರ ಈ ನಾಲ್ಕು ಪುಟಗಳ ತೀರ್ಪು ತಿರುವುಮುರುವುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News