ದೇಹಭಂಗಿಯನ್ನು ಸರಿಪಡಿಸುವ ಎಐ ಸಾಧನ ಆವಿಷ್ಕರಿಸಿದ ವಿದ್ಯಾರ್ಥಿಗಳು

Update: 2019-02-14 16:30 GMT

ಗುರುಗ್ರಾಮ,ಫೆ.14: ಇಲ್ಲಿಯ ಶಿವ ನಾಡಾರ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ತಂಡವೊಂದು ‘ಟೆಕ್ಸ್ಟ್ ನೆಕ್’ನಿಂದ ಬಳಲುವ ವ್ಯಕ್ತಿಗಳ ದೇಹಭಂಗಿಯನ್ನು ಸರಿಪಡಿಸಲು ನೆರವಾಗುವ ಸುಲಭವಾಗಿ ಸಾಗಿಸಬಹುದಾದ, ಮಿತವ್ಯಯಕರ,ಬಳಕೆದಾರ ಸ್ನೇಹಿ,ಕೃತಕ ಬುದ್ಧಿಮತ್ತೆ(ಎಐ)ಯಿಂದ ಕಾರ್ಯ ನಿರ್ವಹಿಸುವ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ.

ದೀರ್ಘಾವಧಿಗೆ ಮೊಬೈಲ್ ಅಥವಾ ಟ್ಯಾಬ್ಲೆಟ್‌ ನಂತಹ ಕೈಯಲ್ಲಿ ಹಿಡಿದುಕೊಳ್ಳುವ ಸಾಧನಗಳ ಅತಿಯಾದ ವೀಕ್ಷಣೆ ಅಥವಾ ಅವುಗಳ ಮೂಲಕ ಸಂದೇಶ ರವಾನೆಯಿಂದ ಕುತ್ತಿಗೆಯ ಮೇಲೆ ಪದೇ ಪದೇ ಬೀಳುವ ಒತ್ತಡ ಮತ್ತು ನೋವಿನ ಸ್ಥಿತಿಯನ್ನು ‘ಟೆಕ್ಸ್ಟ್ ನೆಕ್’ ಎಂದು ಕರೆಯಲಾಗುತ್ತದೆ. ವಿದ್ಯಾರ್ಥಿಗಳು ಆವಿಷ್ಕರಿಸಿರುವ ಈ ಸಾಧನವು ವ್ಯಕ್ತಿಯು ತಪ್ಪಾದ ಭಂಗಿಯಲ್ಲಿ ಕುಳಿತಿದ್ದರೆ ಎಚ್ಚರಿಕೆಯ ಸಂಕೇತಗಳನ್ನು ರವಾನಿಸುವ ಜೊತೆಗೆ ಅಂತಹ ಭಂಗಿಯಲ್ಲಿ ಆತ/ಆಕೆ ಎಷ್ಟು ಸಲ ಕುಳಿತುಕೊಂಡಿದ್ದ ಎನ್ನುವುದನ್ನೂ ಸೂಚಿಸುತ್ತದೆ.

ಅಸಮರ್ಪಕ ದೇಹಭಂಗಿಗಳು ಸಂಧಿವಾತ,ಉಸಿರಾಟದ ತೊಂದರೆ,ತಲೆನೋವು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ಅಧ್ಯಯನಗಳು ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News