ಅಕ್ರಮ ಸಂಪತ್ತು ಗಳಿಕೆ ಪ್ರಕರಣ: ಐಟಿ ಆಯುಕ್ತರಿಗೆ 7 ವರ್ಷ ಜೈಲು

Update: 2019-02-15 03:48 GMT

ಡೆಹ್ರಾಡೂನ್,ಫೆ.14: 14 ವರ್ಷಗಳಷ್ಟು ಹಳೆಯ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಆದಾಯ ತೆರಿಗೆ ಆಯುಕ್ತ ಶ್ವೇತಾಭ್ ಸುಮನ್ ಅವರಿಗೆ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಗುರುವಾರ ಏಳು ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ಪ್ರಕಟಿಸಿದೆ. ಜೊತೆಗೆ 3.50 ಕೋ.ರೂ.ಗಳ ದಂಡವನ್ನೂ ವಿಧಿಸಿದೆ.

ವಿಶೇಷ ಸಿಬಿಐ ನ್ಯಾಯಾಧೀಶೆ ಸುಜಾತಾ ಸಿಂಗ್ ಅವರು ಸುಮನ್ ತಾಯಿ ಗುಲಾಬ್ ದೇವಿ(90) ಅವರಿಗೆ ಒಂದು ವರ್ಷ ಹಾಗೂ ಭಾವ ಅರುಣಕುಮಾರ ಸಿಂಗ್ ಮತ್ತು ನಿಕಟ ಸಹಾಯಕ ರಾಜೇಂದ್ರ ವಿಕ್ರಮ ಸಿಂಗ್ ಅವರಿಗೆ ತಲಾ ನಾಲ್ಕು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದರು.

ಡೆಹ್ರಾಡೂನ್, ಗಾಝಿಯಾಬಾದ್, ಬಿಹಾರ ಮತ್ತು ಜಾರ್ಖಂಡ್ ‌ಗಳಲ್ಲಿ ತನ್ನ ಬಲ್ಲ ಆದಾಯ ಮೂಲಗಳಿಗೂ ಮೀರಿದ ಆಸ್ತಿಗಳನ್ನು ಹೊಂದಿದ್ದಕ್ಕಾಗಿ ಸುಮನ್ ವಿರುದ್ಧ ಸಿಬಿಐ ಅಧಿಕಾರಿಗಳು 2005ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News