ಆಲಿಘರ್ ಮುಸ್ಲಿಂ ವಿವಿ ವಿದ್ಯಾರ್ಥಿಗಳ ವಿರುದ್ಧದ ದೇಶದ್ರೋಹ ಪ್ರಕರಣ ರದ್ದು

Update: 2019-02-14 18:14 GMT

ಲಕ್ನೊ, ಫೆ.14: ಪುರಾವೆಯಿಲ್ಲದ ಕಾರಣ ಅಲಿಗಡ ಮುಸ್ಲಿಂ ವಿವಿಯ 14 ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣವನ್ನು ರದ್ದುಪಡಿಸುವುದಾಗಿ ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ತಿಳಿಸಿರುವ ಅಂಶವನ್ನು ಪರಿಗಣಿಸಿ ಆರೋಪಪಟ್ಟಿಯಲ್ಲಿ ದೇಶದ್ರೋಹ ಪ್ರಕರಣವನ್ನು ಸೇರಿಸಲಾಗಿತ್ತು. ಆದರೆ ಪ್ರಾಥಮಿಕ ತನಿಖೆಯ ಬಳಿಕ ಈ ಆರೋಪಕ್ಕೆ ಸೂಕ್ತ ಪುರಾವೆ ಲಭ್ಯವಾಗದ ಕಾರಣ ದೇಶದ್ರೋಹ ಪ್ರಕರಣ ಕೈಬಿಡಲಾಗಿದೆ ಎಂದು ಅಲಿಗಡ ನಗರ ಪೊಲೀಸ್ ಅಧೀಕ್ಷಕ ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ.

ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಮುಕೇಶ್ ಲೋಧಿ ಬುಧವಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ನೂರಾರು ‘ಅಮು’ ವಿದ್ಯಾರ್ಥಿಗಳು ತನ್ನ ವಾಹನವನ್ನು ಸುತ್ತುವರಿದು ತನ್ನ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಪರ ಹಾಗೂ ಭಾರತ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ದೇಶದ್ರೋಹ ಪ್ರಕರಣ ಸೇರಿಸಲಾಗಿತ್ತು. ಆದರೆ ಘಟನೆಗೆ ಪೂರಕವಾಗಿ ಲೋಧಿ ಸಲ್ಲಿಸಿದ್ದ ವೀಡಿಯೊ ತುಣುಕಿನಲ್ಲಿ ವಿದ್ಯಾರ್ಥಿಗಳು ಭಾರತ ವಿರೋಧಿ ಘೋಷಣೆ ಕೂಗುತ್ತಿರುವುದು ಕಂಡುಬಂದಿಲ್ಲ. ಆದ್ದರಿಂದ ಪುರಾವೆಯಿಲ್ಲದ ಕಾರಣ ದೇಶದ್ರೋಹದ ಪ್ರಕರಣ ರದ್ದುಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಈ ಮಧ್ಯೆ, ಮಂಗಳವಾರ ಸಂಜೆ ವಿವಿಯ ಕ್ಯಾಂಪಸ್‌ನಲ್ಲಿ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದ ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿಯೊಬ್ಬರು ಸ್ಟುಡಿಯೋದಲ್ಲಿ ಕೇಳಲಾದ ಪ್ರಶ್ನೆಗೆ ಪ್ರತ್ರಿಕಿಯೆ ನೀಡುವಾಗ ‘ಭಯೋತ್ಪಾದಕರ ವಿವಿ’ ಎಂದು ಉಲ್ಲೇಖಿಸಿರುವ ಬಗ್ಗೆ ವಿವಿ ವಿದ್ಯಾರ್ಥಿಯೋರ್ವ ಟ್ವೀಟ್ ಮಾಡಿದ್ದು ಈ ಹಿನ್ನೆಲೆಯಲ್ಲಿ ಟಿವಿ ವಾಹಿನಿಯ ವಿರುದ್ಧ ವಿವಿ ಆಡಳಿತ ವರ್ಗ ದೂರು ದಾಖಲಿಸಿದೆ. -ಅವಂತಿಪೋರಾದಲ್ಲಿ ಸಂಭವಿಸಿದ ಘಟನೆ -ಬೆಂಗಾವಲು ವಾಹನಗಳನ್ನು ಗುರಿಯಾಗಿರಿಸಿ ದಾಳಿ.

-ವಾಹನಗಳಲ್ಲಿ 2500ಕ್ಕೂ ಅಧಿಕ ಯೋಧರಿದ್ದರು. -ಶಕ್ತಿಶಾಲಿ ಐಇಡಿಯಿಂದ 1 ಬಸ್ ಸ್ಫೋಟ. -ದಾಳಿಯ ಹೊಣೆ ಹೊತ್ತ ಜೈಸೆ-ಮುಹಮ್ಮದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News