ಆತೂರು ಬದ್ರಿಯಾ ಮದ್ರಸದ 11 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Update: 2019-02-14 18:38 GMT

ಉಪ್ಪಿನಂಗಡಿ,ಫೆ,14: ಸಮಸ್ತ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ನಿರ್ದೇಶನದಂತೆ ಬೆಳ್ಳಾರೆಯಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಕಲಾ ಮೇಳ-ವಿದ್ಯಾರ್ಥಿ ಫೆಸ್ಟ್-2019ರಲ್ಲಿ ವಿವಿಧ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಆತೂರು ಬದ್ರಿಯಾ ತದ್‍ಬೀರುಲ್ ಇಸ್ಲಾಂ ಮದ್ರಸದ 11 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಆತೂರು ತದ್‍ಬೀರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳಾದ ಮುಝಮ್ಮಿಲ್ (ಜೂನಿಯರ್ ಅರೇಬಿಕ್ ಹಾಡು), ಅಫ್‍ಸರ್ (ಜೂನಿಯರ್ ಕನ್ನಡ ಭಾಷಣ), ಮುಹ್‍ಸಿನ್ (ಸೂಪರ್ ಸೀನಿಯರ್ ಕನ್ನಡ ಹಾಡು), ಸುಹೈಲ್ (ಪ್ರಬಂಧ ಸ್ಪರ್ಧೆ) ಹಾಗೂ ಬುರ್ದಾ ಆಲಾಪನಾ ಸ್ಪರ್ಧೆಯಲ್ಲಿ ಸೀನಿಯರ್ ವಿಭಾಗದ ತುಫೈಲ್, ಜಲಾಲುದ್ದೀನ್, ಆಶಿಕ್, ಸಿನಾನ್, ಸನಾಬಿಲ್, ಸಫ್ವಾನ್, ಇಮಾಮುದ್ದೀನ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಬೆಳ್ಳಾರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್, ಆತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸೆಯ್ಯದ್ ಅನಸ್ ತಂಙಳ್, ಮದ್ರಸದ ಮುಖ್ಯ ಶಿಕ್ಷಕ ಕೆ.ಎಂ. ಸಿದ್ದಿಕ್ ಫೈಝಿ ಮತ್ತು ವಿಜೇತ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News