ಗಂಗೊಳ್ಳಿ: ಹುತಾತ್ಮ ಯೋಧರಿಗೆ ಸರ್ಕಾರಿ ಉರ್ದು ಶಾಲಾ ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ

Update: 2019-02-15 05:57 GMT

ಕುಂದಾಪುರ, ಫೆ.15: ನಿನ್ನೆ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ವೀರಮರಣವನ್ನಪ್ಪಿದ ದೇಶದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಗಂಗೊಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಬೋರ್ಡ್ ಸ್ಕೂಲ್)ಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು..

ಶಾಲಾರಂಭಕ್ಕೆ ಮುನ್ನ ಶಿಕ್ಷಕಿ ಹೇಮಾವತಿ ನಿನ್ನೆ ದು:ಖಕರ ಘಟನೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ತದನಂತರ ಅಗಲಿದ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶಕೀಲಾ ತಬಸ್ಸುಮ್, ರಾಗಿಣಿ, ಭಾರತಿ ಕಲ್ಕೂರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಹಾಬುದ್ದಿನ್ ಅಉಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News