ರಹೀಂ ಟೀಕೆ ನಿಧನ ಹಿನ್ನೆಲೆ: ‘ಬ್ಯಾರಿ ಅಧ್ಯಯನ ಪೀಠ’ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆ

Update: 2019-02-15 09:25 GMT

ಮಂಗಳೂರು, ಫೆ.15: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ‘ಬ್ಯಾರಿ ಅಧ್ಯಯನ ಪೀಠ’ದ ಉದ್ಘಾಟನಾ ಕಾರ್ಯಕ್ರಮವನ್ನು ಬ್ಯಾರಿ ಆಂದೋಲನದ ಪ್ರಮುಖ ರೂವಾರಿ ಅಬ್ದುಲ್ ರಹೀಂ ಟೀಕೆ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ವಿವಿಯ ಅಧಿಕೃತ ಮೂಲಗಳು ತಿಳಿಸಿವೆ.
 ಫೆ.16ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ವಿವಿಯ ಹಳೆ ಸೆನೆಟ್ ಹಾಲ್‌ನಲ್ಲಿ ನಿಗದಿಯಾಗಿದ್ದ ಪೀಠದ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ.ಖಾನ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News