ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Update: 2019-02-15 13:03 GMT

ಮಂಗಳೂರು, ಫೆ. 15: ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೋಫ್ಟ್ ವೇರ್ ಟ್ರೈನಿಂಗ್ ಸಂಸ್ಥೆಯ ಸಹಯೋಗದೊಂದಿಗೆ, “ಹಣಕಾಸು ವರದಿ ಮತ್ತು ವಿಶ್ಲೇಷಣೆ” ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. 

ಮಂಗಳೂರಿನ ಎಂ.ಆರ್.ಪಿ.ಎಲ್.ನ ಸೀನಿಯರ್ ಮ್ಯಾನೇಜರ್, ಶ್ರೀ ಜಿತೇಶ್ ಚೌಧುರಿಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿತೇಶ್ ಚೌಧುರಿ ಅವರು ತಮ್ಮ ಉದ್ಘಾಟನಾ ಮಾತುಗಳನ್ನಾಡುತ್ತಾ, ಹಣಕಾಸು ವರದಿಗಾರಿಕೆಯ ಪ್ರಾಮುಖ್ಯತೆ ಬೆಳೆಯುತ್ತಿರುವುದರ ಬಗ್ಗೆ ಒತ್ತು ನೀಡಿ ಮಾತನಾಡಿದರು.

ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ನಿರ್ದೇಶಕರಾದ ವಂದನೀಯ ಧರ್ಮ ಗುರುಗಳಾದ ಪ್ರದೀಪ್  ಅ್ಯಂಟನಿ ಮಾತನಾಡುತ್ತಾ, ಹಗರಣಗಳು ಹೆಚ್ಚಾಗುತ್ತಿರುವ ಪ್ರಸ್ತುತ ಇಂದಿನ ದಿನಮಾನಗಳ ಬಗ್ಗೆ ನುಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹೆಚ್ಚಿಸಲು ಅವಕಾಶಗಳನ್ನು ಸೃಷ್ಟಿ ಮಾಡುವ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಾಣಿಜ್ಯ ವಿಭಾಗದ ಶ್ರಮವನ್ನು ಶ್ಲಾಘಿಸಿದರು.

ಕಾಲೇಜಿನ ವಾಣಿಜ್ಯ ವಿಭಾಗದ ಡೀನ್, ಡಾ. ಸುರೇಶ್ ಪೂಜಾರಿ, ವಿಭಾಗ ಮುಖ್ಯಸ್ಥ, ಡಾ. ಮಾನ್ಯುಯೆಲ್ ತಾವ್ರೊ, ನಿರ್ದೇಶಕ, ಫಾ. ಪ್ರದೀಪ್ ಆಂಥೋನಿ ಎಸ್.ಜೆ., ಕಾರ್ಯಕ್ರಮ ಸಂಯೋಜಕಿ ನಿಶಾ ಗೋಪಾಲ್  ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ, ಸಿಲ್ವಿಯ ದಾಸ್ ಮರ್ಸಿಸ್ ಜಾವೊ ಕಾರ್ಯಕ್ರಮ ನಿರೂಪಿಸಿದರು. ಡಾ. ಸುರೇಶ್ ಪೂಜಾರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ನಿಶಾ ಗೋಪಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News